‘ರಾಜ್ಯ ಸರ್ಕಾರ ವಿವಿಧ ಭಾಗ್ಯಗಳನ್ನು ಕಲ್ಪಿಸಿ ಉತ್ತಮ ಕೆಲಸ ಮಾಡಿದೆ. ಅದೇ ರೀತಿ ಕುಡುಕರ ಭಾಗ್ಯ ಕಲ್ಪಿಸಿದರೆ ಶ್ರಮಿಕ ವರ್ಗದವರಿಗೆ ಸಹಾಯವಾಗಲಿದೆ. ದಿನದ ಕೂಲಿಯಲ್ಲಿ ಅರ್ಧದಷ್ಟು ಹಣ ಕುಡಿತಕ್ಕೇ ಹೋಗುತ್ತಿದೆ. 300 ರು. ಕೂಲಿ ತೆಗೆದುಕೊಂಡರೆ 200ರು. ಖಾಲಿಯಾಗುತ್ತಿದೆ. ಕನಿಷ್ಠ ಬಿಪಿಎಲ್ ಕಾರ್ಡುದಾರರಿಗೆ ರಿಯಾಯಿತಿ ದರದಲ್ಲಿ ಒಂದು ಬಾಟಲ್ ಆದರೂ ಒದಗಿಸಿದರೆ ಸಹಕಾರಿಯಾಗುತ್ತದೆ.’

ಬೆಂಗಳೂರು: ‘ರಾಜ್ಯ ಸರ್ಕಾರ ವಿವಿಧ ಭಾಗ್ಯಗಳನ್ನು ಕಲ್ಪಿಸಿ ಉತ್ತಮ ಕೆಲಸ ಮಾಡಿದೆ. ಅದೇ ರೀತಿ ಕುಡುಕರ ಭಾಗ್ಯ ಕಲ್ಪಿಸಿದರೆ ಶ್ರಮಿಕ ವರ್ಗದವರಿಗೆ ಸಹಾಯವಾಗಲಿದೆ. ದಿನದ ಕೂಲಿಯಲ್ಲಿ ಅರ್ಧದಷ್ಟು ಹಣ ಕುಡಿತಕ್ಕೇ ಹೋಗುತ್ತಿದೆ. 300 ರು. ಕೂಲಿ ತೆಗೆದುಕೊಂಡರೆ 200ರು. ಖಾಲಿಯಾಗುತ್ತಿದೆ. ಕನಿಷ್ಠ ಬಿಪಿಎಲ್ ಕಾರ್ಡುದಾರರಿಗೆ ರಿಯಾಯಿತಿ ದರದಲ್ಲಿ ಒಂದು ಬಾಟಲ್ ಆದರೂ ಒದಗಿಸಿದರೆ ಸಹಕಾರಿಯಾಗುತ್ತದೆ.’

ಸುವರ್ಣ ಸುದ್ದಿವಾಹಿನಿಯಲ್ಲಿ ಭಾನುವಾರ ‘ಹಲೋ ಮಿನಿಸ್ಟರ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ಚಿಕ್ಕಬಳ್ಳಾಪುರದಿಂದ ಸಾರ್ವಜನಿಕರೊಬ್ಬರು ಕರೆ ಮಾಡಿ ಹೀಗಂತ ಮನವಿ ಮಾಡಿದ್ದಾರೆ!

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕುಡಿತಕ್ಕೆ ಕಡಿವಾಣ ಹಾಕುವ ನಿಟ್ಟಿಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆಯೇ ವಿನಾ ಪ್ರೋತ್ಸಾಹ ನೀಡುವ ಯಾವುದೇ ಯೋಜನೆಗಳನ್ನು ಜಾರಿಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.