ಲಕ್ನೋ(ಸೆ.30): ಕುಡಿದು ಮತ್ತಿನಲ್ಲಿ ನಮ್ಮ ಜನಕ್ಕೆ ತಾವು ಏನು ಮಾಡುತ್ತಿದ್ದೇವೆ ಎನ್ನುವುದು ಕೂಡಾ ಸಹ ಗೊತ್ತಾಗಲ್ಲ ಇದೇ ರೀತಿ ಕಂಠ ಪೂರ್ತಿ ಕುಡಿದ ಕುಡುಕನೊಬ್ಬ ಫಜೀತಿ ಮಾಡಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉತ್ತರಪ್ರದೇಶದ ಜಲೌನ್‌ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಬೆತ್ತಲಾಗಿ ವಿದ್ಯುತ್ ಕಂಬ ಏರಿದ್ದಾನೆ. ಬಳಿಕ ಹೈ ವೋಲ್ಟೇಜ್ ಇರುವ ತಂತಿಗಳ ಮೇಲೆ ನಿಂತು ಶಕ್ತಿಮಾನ್ ರೀತಿ ಪೋಸ್ ಕೊಟ್ಟಿದ್ದಾನೆ. ದೇವರ ದಯೆ ಆತ ಕಂಬ ಏರುವ ಸಂದರ್ಭದಲ್ಲಿ ವಿದ್ಯುತ್ ಇಲ್ಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇವನ ಹುಚ್ಚಾಟ ಕಂಡ ಸ್ಥಳೀಯರು ಈತನ ಮನವೊಲಿಸಿ ಕೆಳಗಿಳಿಸಿದ್ದಾರೆ. ಬಳಿಕ ಪೊಲೀಸರಿಗೊಪ್ಪಿಸಿದ್ದಾರೆ.