ಕಜಕಿಸ್ತಾನ[ಆ.03]: ಕೆಲವು ಸಲ ಮದ್ಯದ ಅಮಲಿನಲ್ಲಿರುವವರು ಮಾಡುವ ಕಿತಾಪತಿ ಅಂತಿಂಥದ್ದಲ್ಲಾ. ಅವರು ಮಾಡುವ ಹುಚ್ಚಾಟ ನೋಡಿ ಇಡೀ ಊರೇ ನಗುತ್ತಿದ್ದರೂ, ತಾವು ಹೀರೋ ಎಂಬ ಕನವರಿಕೆಯಲ್ಲಿರುತ್ತಾರೆ.

ಕಜಕಿಸ್ತಾನದಲ್ಲಿ ಮದ್ಯದ ಅಮಲೇರಿಸಿಕೊಂಡಿದ್ದ ವ್ಯಕ್ತಿಯೋರ್ವ, ಪ್ರಾಣಿ ಸಂಗ್ರಹಾಲಯದಲ್ಲಿ ಮಾಡಿದ ಸರ್ಕಸ್‌ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್‌ ಆಗಿದೆ. ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಪ್ರಾಣಿಗಳು ಹಾಗೂ ವೀಕ್ಷಕರಿಗೆ ಅಡ್ಡಲಾಗಿ ಹಾಕಲಾಗಿದ್ದ ಬೇಲಿಯನ್ನು ದಾಟಿ ಜಿರಾಫೆ ಮೇಲೇರಿದ್ದಾನೆ.

 
 
 
 
 
 
 
 
 
 
 
 
 
 
 

A post shared by Туркестан | Түркістан (@turkestan_today) on Jul 27, 2019 at 4:47am PDT

ಇದಾಗಿ ಕೆಲವೇ ಸೆಕೆಂಡುಗಳಲ್ಲಿ ಜಿರಾಫೆ ಎತ್ತರಕ್ಕೆ ನೆಗೆದಿದ್ದು, ವ್ಯಕ್ತಿ ಜಿರಾಫೆ ಮೇಲಿಂದ ಬಿದ್ದ ವಿಡಿಯೋ ಕಂಡು ಜನ ಬಿದ್ದುಬಿದ್ದು ನಗುತ್ತಿದ್ದಾರೆ.