Asianet Suvarna News Asianet Suvarna News

ಬನಾರಸ್ ಹಾಗೂ ಅಲಿಗಢ್ ವಿವಿಗಳಿಗೆ ಹಿಂದು ಮತ್ತು ಮುಸ್ಲಿಂ ಹೆಸರನ್ನು ಬದಲಿಸಲು ಯುಜಿಸಿ ಶಿಫಾರಸ್ಸು

ಕೇಂದ್ರದಿಂದ ಅನುದಾನ ಪಡೆಯುವ ವಿವಿಗಳು ಜಾತ್ಯಾತೀತ ವಿಶ್ವವಿದ್ಯಾಲಯವಾಗಿರಬೇಕು ಜೊತೆಗೆ ಧರ್ಮದ ಆಧಾರದಿಂದ ಮುಕ್ತವಾಗಿರಬೇಕು. ಯಾವುದೇ ರೀತಿಯ ಧಾರ್ಮಿಕ ಹೆಸರನ್ನು ಹೊಂದಿರಬಾರದು

Drop Muslim and Hindu words from Banaras and Aligarh universities

ನವದೆಹಲಿ(ಅ.09): ಬನಾರಸ್ ಹಾಗೂ ಅಲಿಘಡ್ ವಿವಿಗಳು ಹಿಂದು ಮತ್ತು ಮುಸ್ಲಿಂ ಹೆಸರುಗಳನ್ನು ಬದಲಿಸುವಂತೆ ಯುಜಿಸಿ(ವಿಶ್ವವಿದ್ಯಾಲಯ ಧನಸಹಾಯ ಆಯೋಗ) ಮಂಡಳಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ಕೇಂದ್ರದಿಂದ ಅನುದಾನ ಪಡೆಯುವ ವಿವಿಗಳು ಜಾತ್ಯಾತೀತ ವಿಶ್ವವಿದ್ಯಾಲಯವಾಗಿರಬೇಕು ಜೊತೆಗೆ ಧರ್ಮದ ಆಧಾರದಿಂದ ಮುಕ್ತವಾಗಿರಬೇಕು. ಯಾವುದೇ ರೀತಿಯ ಧಾರ್ಮಿಕ ಹೆಸರನ್ನು ಹೊಂದಿರಬಾರದು ಎಂದು ಮಂಡಳಿ ತಿಳಿಸಿದೆ. ಅಲಿಘಡ ವಿವಿಗೆ ಅಲಿಘಡ ವಿವಿ ಅಥವಾ ಸಂಸ್ಥಾಪಕ ಸರ್ ಸಯ್ಯದ್ ಅಹಮದ್ ಖಾನ್ ಹೆಸರನ್ನು ಇಟ್ಟುಕೊಳ್ಳಬೇಕು ಎಂದು ಶಿಫಾರಸ್ಸು ಮಾಡಿದೆ. ಅದೇ ರೀತಿ ಬನಾರಸ್ ವಿವಿಯನ್ನು ಪುನರ್ ನಾಮಕರಣ ಮಾಡುವಂತೆ ಸೂಚಿಸಿದೆ.

ಅನುದಾನ ಪಡೆಯುವ 10 ಕೇಂದ್ರೀಯ ವಿವಿಗಳಲ್ಲಿ ನಡೆಯುತ್ತಿರುವ ಅಕ್ರಮಗಳ ದೂರುಗಳನ್ನು ಅವಲೋಕಿಸುವ  ಸಲುವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು ಇದೇ ಏಪ್ರಿಲ್'ನಲ್ಲಿ ಪ್ರತಿಷ್ಟಿತ ವಿವಿಗಳ ಶೈಕ್ಷಣಿಕ ಪರಿಣಿತರನ್ನು ಹೊಂದಿರುವ ಮಂಡಳಿ ರಚಿಸಿತ್ತು. ಅಲಿಗಢ ಮುಸ್ಲಿಂ ವಿವಿಯನ್ನು ಸರ್ ಸಯ್ಯದ್ ಅಹ್ಮದ್ ಖಾನ್, ಹಿಂದೂ ಬನಾರಸ್ ವಿಶ್ವವಿದ್ಯಾಲಯವನ್ನು ಮದನ ಮೋಹನ್ ಮಾಳವೀಯ ಸ್ಥಾಪಿಸಿದ್ದರು

Follow Us:
Download App:
  • android
  • ios