ಬಸ್‌ ಚಲಾಯಿಸುವ ವೇಳೆ ಚಾಲಕರು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರೆ ಫೋಟೊ ತೆಗೆದು ಸಾರಿಗೆ ಇಲಾಖೆಗೆ ರವಾನಿಸಿದವರಿಗೆ ನಗದು ಬಹುಮಾನ ನೀಡುವ ಯೋಜನೆ ಉತ್ತರ ಪ್ರದೇಶದಲ್ಲಿ ಜಾರಿಯಾಗಿದೆ.
ಅಲ್ಲದೆ ಆ ರೀತಿ ಫೋನ್ನಲ್ಲಿ ಮಾತನಾಡುತ್ತಾ ಬಸ್ ಚಲಾಯಿ ಸುವ ಚಾಲಕರಿಗೆ ದಂಡ ವಿಧಿಸಲಾಗುತ್ತದೆ. ವಾಹನ ಚಲಾಯಿಸುವಾಗ ಮೊಬೈಲ್ ಫೋನ್ಗಳಲ್ಲಿ ಮಾತನಾಡಬಾರದು ಎಂಬ ನಿಯಮವಿ ದ್ದರೂ, ಚಾಲಕರು ನಿಯಮ ಉಲ್ಲಂಘಿಸುವ ಬಗ್ಗೆ ಪ್ರಯಾಣಿಕರಿಂದ ದೂರುಗಳು ಬರುತ್ತಿರು ತ್ತವೆ.
ಹೀಗಾಗಿ ಅಂತಹ ಚಾಲಕರ ಫೋಟೊ ತೆಗೆದು ವಾಟ್ಸಪ್ ಮಾಡುವಂತೆ ಕೋರಲಾಗಿದೆ.
(ಸಾಂದರ್ಭಿಕ ಚಿತ್ರ)
