Asianet Suvarna News Asianet Suvarna News

ವರನಟ ರಾಜ್ ಅಪಹರಣ ಪ್ರಕರಣದ ತೀರ್ಪು ಇಂದು

2000ನೇ ಇಸವಿ ಜುಲೈ 30ರಂದು ತಮಿಳುನಾಡಿನ ಗಡಿಭಾಗದಲ್ಲಿರುವ ಗಾಜನೂರಿನ ಮನೆಯಿಂದ ರಾಜ್‌ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ್ದ. ಈ ವಿಷಯ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಭಾರೀ ಹಿಂಸಾಚಾರಕ್ಕೆ ಕಾರಣವಾಗಿತ್ತು.

Dr Rajkumar abduction Case Verdict will announce today
Author
Erode, First Published Sep 25, 2018, 9:13 AM IST

ಈರೋಡ್(ಸೆ.25): 18 ವರ್ಷಗಳ ಹಿಂದೆ ಕನ್ನಡದ ವರನಟ ರಾಜ್‌ಕುಮಾರ್ ಅವರನ್ನು, ದಂತಚೋರ ವೀರಪ್ಪನ್ ಮತ್ತು ಆತನ ಸಂಗಡಿಗರು ಅಪಹರಣ ಮಾಡಿದ್ದ ಪ್ರಕರಣ ಸಂಬಂಧ ದಾಖಲಾಗಿದ್ದ ಕೇಸಿನ ತೀರ್ಪು ಇಂದು ಪ್ರಕಟವಾಗಲಿದೆ. ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂನ ನ್ಯಾಯಾಲಯ ಈ ತೀರ್ಪು ಪ್ರಕಟಿಸಲಿದೆ.

2000ನೇ ಇಸವಿ ಜುಲೈ 30ರಂದು ತಮಿಳುನಾಡಿನ ಗಡಿಭಾಗದಲ್ಲಿರುವ ಗಾಜನೂರಿನ ಮನೆಯಿಂದ ರಾಜ್‌ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ್ದ. ಈ ವಿಷಯ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಭಾರೀ ಹಿಂಸಾಚಾರಕ್ಕೆ ಕಾರಣವಾಗಿತ್ತು. ರಾಜ್ ಬಿಡಿಸಲು ಉಭಯ ರಾಜ್ಯಗಳು ಭಾರೀ ಶ್ರಮವಹಿಸಿದ್ದವು. ಅಂತಿಮವಾಗಿ 108 ದಿನದ ಬಳಿಕ ರಾಜ್‌ರನ್ನು, ವೀರಪ್ಪನ್ ಯಾವುದೇ ತೊಂದರೆ ಇಲ್ಲದೆ ಬಿಡುಗಡೆ ಮಾಡಿದ್ದ. 

ಈ ಸಂಬಂಧ ವೀರಪ್ಪನ್ ಸೇರಿದಂತೆ 8 ಜನರ ವಿರುದ್ಧ ಆರೋಪಪಟ್ಟಿ ಹೊರಿಸಲಾಗಿತ್ತು. ಆದರೆ ವಿಚಾರಣೆ ವೇಳೆ ವೀರಪ್ಪನ್, ಸೇತುಕುಡಿ ಗೋವಿಂದನ್, ರಂಗಸಾಮಿ ಸಾವನ್ನಪ್ಪಿದ್ದರು. ಉಳಿದ 5 ಜನ ಹಾಲಿ ಪ್ರಕರಣ ಸಂಬಂಧ ಜೈಲು ಸೇರಿದ್ದಾರೆ. 2004ರಲ್ಲಿ ವೀರಪ್ಪನ್ ಪೊಲೀಸರ ಗುಂಡಿಗೆ ಬಲಿಯಾಗಿದ್ದ. 2006ರಲ್ಲಿ ರಾಜ್ ನಿಧನರಾಗಿದ್ದರು.
 

Follow Us:
Download App:
  • android
  • ios