ಪರಮೇಶ್ವರ್ ರಾಜೀನಾಮೆ ನಿರಾಕರಿಸಿದ ಸಭಾಪತಿ ಶಂಕರ್ ಮೂರ್ತಿ

First Published 24, May 2018, 3:41 PM IST
Dr G Parameshwara Resigns As MLC
Highlights

ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು,  ರಾಜೀನಾಮೆಯನ್ನು ಸಭಾಪತಿ ಶಂಕರಮೂರ್ತಿ ನಿರಾಕರಿಸಿದ್ದಾರೆ. 

ಬೆಂಗಳೂರು : ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು,  ರಾಜೀನಾಮೆಯನ್ನು ಸಭಾಪತಿ ಶಂಕರಮೂರ್ತಿ ನಿರಾಕರಿಸಿದ್ದಾರೆ. 

ಯಾವುದೇ ವ್ಯಕ್ತಿ  ಶಾಸಕರಾಗಿ ಆಯ್ಕೆಯಾಗುತ್ತಿದ್ದಂತೆ ಪರಿಷತ್ ಸದಸ್ಯತ್ವ ರದ್ದಾಗುತ್ತದೆ. ಇದಕ್ಕೆ ರಾಜೀನಾಮೆ ನೀಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. 

ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಸಭಾಪತಿಗಳು ಸೂಚಿಸಿದ ಹಿನ್ನೆಲೆಯಲ್ಲಿ ಪರಮೇಶ್ವರ್ ತಮ್ಮ ರಾಜೀನಾಮೆಯನ್ನು ಹಿಂಪಡೆದಿದ್ದಾರೆ. 

25ನೇ ಮುಖ್ಯಮಂತ್ರಿಯಾಗಿ ಜೆಡಿಎಸ್ ಮುಖಂಡ ಎಚ್.ಡಿ ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸಿದ ವೇಳೆಯೇ  ರಾಜ್ಯದ 9ನೇ  ಉಪಮುಖ್ಯಮಂತ್ರಿಯಾಗಿ ಪರಮೇಶ್ವರ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದರು. 

loader