ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ (ಬ್ರಿಕ್ಸ್) ರಾಷ್ಟ್ರಗಳ ಎನ್‌ಎಸ್‌ಎಗಳ ಒಂದು ದಿನದ ಸಮಾವೇಶದ ಬಳಿಕ, ಕ್ಸಿ ಜೊತೆ ಸದಸ್ಯ ರಾಷ್ಟ್ರಗಳ ಎನ್‌ಎಸ್‌ಎಗಳು ಸಂವಾದ ನಡೆಸಿದರು. ದೊವಲ್ ಮತ್ತು ಚೀನಾದ ಭದ್ರತಾ ಸಲಹೆಗಾರ ಯಾಂಗ್ ಜೀಚಿ ನಡುವೆ ಗುರುವಾರ ಮಾತುಕತೆ ನಡೆದಿತ್ತು. ದ್ವಿಪಕ್ಷೀಯ ಸಂಬಂಧಗಳ ಪ್ರಮುಖ ಸಮಸ್ಯೆಗಳ ಬಗ್ಗೆ ಮಾತ್ರ ಮಾತುಕತೆ ನಡೆದಿದೆ. ಈ ಮಾತುಕತೆಯ ವೇಳೆ ಡೋಕ್ಲಾಂ ಬಿಕ್ಕಟ್ಟಿನ ಬಗ್ಗೆ ಚೀನಾ ಪ್ರಸ್ತಾಪ ಮಾಡಿಲ್ಲ ಎನ್ನಲಾಗಿದೆ.
ಬೀಜಿಂಗ್: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಬ್ರಿಕ್ಸ್ ರಾಷ್ಟ್ರಗಳ ಇತರ ಭದ್ರತಾ ಸಲಹೆಗಾರರು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ರನ್ನು ಶುಕ್ರವಾರ ಭೇಟಿಯಾದರು. ಭೌಗೋಳಿಕ ದೂರ ಎಷ್ಟೇ ಇದ್ದರೂ, ಪರಸ್ಪರ ನಂಬಿಕೆ ಮತ್ತು ಸಹಕಾರ ವೃದ್ಧಿಸುವ ನಿಟ್ಟಿನಲ್ಲಿ ಸದಸ್ಯ ರಾಷ್ಟ್ರಗಳ ಪ್ರಯತ್ನಗಳ ಬಗ್ಗೆ ಈ ಸಂದರ್ಭ ಕ್ಸಿ ಜಿನ್ಪಿಂಗ್ ಮೆಚ್ಚುಗೆ ವ್ಯಕ್ತಪಡಿಸಿದರು. ಸಿಕ್ಕಿಂನ ಡೋಕ್ಲಾಂನಲ್ಲಿ ಭಾರತ ಮತ್ತು ಚೀನಾ ಸೇನೆಯ ನಡುವೆ ಉದ್ಭವಿಸಿರುವ ಉದ್ವಿಗ್ನ ಸ್ಥಿತಿಯ ನಡುವೆ ದೊವಲ್ ಮತ್ತು ಕ್ಸಿ ಭೇಟಿ ಮಹತ್ವವನ್ನು ಪಡೆದಿದೆ.
ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ (ಬ್ರಿಕ್ಸ್) ರಾಷ್ಟ್ರಗಳ ಎನ್ಎಸ್ಎಗಳ ಒಂದು ದಿನದ ಸಮಾವೇಶದ ಬಳಿಕ, ಕ್ಸಿ ಜೊತೆ ಸದಸ್ಯ ರಾಷ್ಟ್ರಗಳ ಎನ್ಎಸ್ಎಗಳು ಸಂವಾದ ನಡೆಸಿದರು. ದೊವಲ್ ಮತ್ತು ಚೀನಾದ ಭದ್ರತಾ ಸಲಹೆಗಾರ ಯಾಂಗ್ ಜೀಚಿ ನಡುವೆ ಗುರುವಾರ ಮಾತುಕತೆ ನಡೆದಿತ್ತು. ದ್ವಿಪಕ್ಷೀಯ ಸಂಬಂಧಗಳ ಪ್ರಮುಖ ಸಮಸ್ಯೆಗಳ ಬಗ್ಗೆ ಮಾತ್ರ ಮಾತುಕತೆ ನಡೆದಿದೆ. ಈ ಮಾತುಕತೆಯ ವೇಳೆ ಡೋಕ್ಲಾಂ ಬಿಕ್ಕಟ್ಟಿನ ಬಗ್ಗೆ ಚೀನಾ ಪ್ರಸ್ತಾಪ ಮಾಡಿಲ್ಲ ಎನ್ನಲಾಗಿದೆ.
epaperkannadaprabha.com
