ಪ್ರಯಾಣಿಕರು ಐಆರ್‌ಸಿಟಿಸಿ ವೆಬ್‌ಸೈಟ್‌ ಅಥವಾ ಮೊಬೈಲ್‌ ಆ್ಯಪ್‌ ಮೂಲಕ ಟಿಕೆಟ್‌ಗಳನ್ನು ಕಾಯ್ದಿರಿಸಿ ಬಳಿಕ ಮನೆಗೆ ಟಿಕೆಟ್‌ ರವಾನೆ ವೇಳೆ ಹಣ ಪಾವತಿಸುವ ‘ಪೇ ಆನ್‌ ಡೆಲಿವರಿ' ಯೋಜನೆ ಆರಂಭಿಸಲಾಗಿದೆ ಎಂದು ಐಆರ್‌ಸಿಟಿಸಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನವದೆಹಲಿ: ರೈಲು ಟಿಕೆಟ್‌ ಖರೀದಿ ಮಾಡಲು ಮುಂದಿನ ದಿನಗಳಲ್ಲಿ ಪ್ರಯಾಣಿಕರು ರೈಲ್ವೆ ನಿಲ್ದಾಣಕ್ಕೆ ಹೋಗುವ ಅಗತ್ಯವೇ ಇಲ್ಲ. ಬದಲಿಗೆ ರೈಲ್ವೆ ಟಿಕೆಟ್‌ ಅನ್ನು ಸಾರ್ವಜನಿಕರ ಮನೆಗಳಿಗೆ ಪೂರೈಕೆ ಮಾಡುವ ಮತ್ತು ಪೂರೈಕೆ ಮಾಡಿದ ಬಳಿಕವಷ್ಟೇ ಹಣ ಪಡೆಯಲು ಐಆರ್‌ಸಿಟಿಸಿ ಮುಂದಾಗಿದೆ.

ಪ್ರಯಾಣಿಕರು ಐಆರ್‌ಸಿಟಿಸಿ ವೆಬ್‌ಸೈಟ್‌ ಅಥವಾ ಮೊಬೈಲ್‌ ಆ್ಯಪ್‌ ಮೂಲಕ ಟಿಕೆಟ್‌ಗಳನ್ನು ಕಾಯ್ದಿರಿಸಿ ಬಳಿಕ ಮನೆಗೆ ಟಿಕೆಟ್‌ ರವಾನೆ ವೇಳೆ ಹಣ ಪಾವತಿಸುವ ‘ಪೇ ಆನ್‌ ಡೆಲಿವರಿ' ಯೋಜನೆ ಆರಂಭಿಸಲಾಗಿದೆ ಎಂದು ಐಆರ್‌ಸಿಟಿಸಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆದರæ ಈ ಸೇವೆ ಪಡೆಯಲು ಮೊದಲು ಗ್ರಾಹಕರು ವೆಬ್‌ಸೈಟ್‌ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು ಮತ್ತು ಟಿಕೆಟ್‌ ಮನೆಗೆ ತಲುಪಿಸಿದ್ದಕ್ಕೆ ಗ್ರಾಹಕರು ಶುಲ್ಕ ಪಾವತಿಸಬೇಕು. 5000 ರು.ಮೊತ್ತದವರೆಗಿನ ಟಿಕೆಟ್‌ಗೆ 90 ರು. ಶುಲ್ಕ ಮತ್ತು ಅದಕ್ಕೆ ತಗುಲುವ ಸೇವಾ ತೆರಿಗೆ ಪಾವತಿಸಬೇಕು, ಅದಕ್ಕೆ ಮೇಲ್ಪಟ್ಟಮೊತ್ತದ ಟಿಕೆಟ್‌ಗೆ 120 ರು. ಶುಲ್ಕ ಮತ್ತು ತೆರಿಗೆ ಪಾವತಿಸಬೇಕು.