ಧರ್ಮಗುರುವೊಬ್ಬರ ಘೋಷಣೆಯಿಂದಾಗಿ ಪ್ರೇರೇಪಿತರಾದ ದಾವೂದಿ ಬೋಹ್ರಾ ಮುಸ್ಲಿಂ ಸಮುದಾಯದ ಜನರು ಪಾಶ್ಚಾತ್ಯ ಮಾದರಿಯ ಟಾಯ್ಲೆಟ್‌ಗಳನ್ನು ಒಡೆದು ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮುಂಬೈ (ಡಿ.27): ಧರ್ಮಗುರುವೊಬ್ಬರ ಘೋಷಣೆಯಿಂದಾಗಿ ಪ್ರೇರೇಪಿತರಾದ ದಾವೂದಿ ಬೋಹ್ರಾ ಮುಸ್ಲಿಂ ಸಮುದಾಯದ ಜನರು ಪಾಶ್ಚಾತ್ಯ ಮಾದರಿಯ ಟಾಯ್ಲೆಟ್ಗಳನ್ನು ಒಡೆದು ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವು ದಿನಗಳ ಹಿಂದೆ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ಕೆಲವು ಮನೆಗಳಲ್ಲಿ ಪಾಶ್ಚಾತ್ಯ ಮಾದರಿಯ ಟಾಯ್ಲೆಟ್ಗಳನ್ನು ಬಳಸುತ್ತಿರುವ ಸಂಗತಿ ತಿಳಿದು ಬಂದಿತ್ತು.
‘ಆದರೆ ಇವು ಹೃದಯ ಸ್ತಂಭನಕ್ಕೆ ಕಾರಣವಾಗಬಲ್ಲವು. ಹೀಗಾಗಿ ಉತ್ತಮ ಆರೋಗ್ಯಕ್ಕಾಗಿ ಭಾರತೀಯ ಶೈಲಿಯ ಟಾಯ್ಲೆಟ್ಗಳನ್ನು ಮಾತ್ರ ಬಳಸಿ’ ಎಂದು ಅಧ್ಯಾತ್ಮ ಗುರು ಸೈಯದ್ನಾ ಮುಫದ್ದಲ್ ಸೈಪುದ್ದೀನ್ ಕರೆ ನೀಡಿದ್ದಾರೆ.
