ಶಿವಸೇನೆ ಹಾಗೂ ಬಿಜೆಪಿ ನಡುವಿನ ಭಿನ್ನಾಭಿಪ್ರಾಯ ಅಂತ್ಯವಾಗುವ ಬದಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಮಗೆ ದೇಶಭಕ್ತಿಯ ಪಾಠವನ್ನು ನೀವು ಕಲಿಸಿಕೊಡುವುದು ಬೇಡ ಎಂದು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಹೇಳಿದ್ದಾರೆ.
ನವದೆಹಲಿ (ಸೆ.30): ಶಿವಸೇನೆ ಹಾಗೂ ಬಿಜೆಪಿ ನಡುವಿನ ಭಿನ್ನಾಭಿಪ್ರಾಯ ಅಂತ್ಯವಾಗುವ ಬದಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಮಗೆ ದೇಶಭಕ್ತಿಯ ಪಾಠವನ್ನು ನೀವು ಕಲಿಸಿಕೊಡುವುದು ಬೇಡ ಎಂದು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಹೇಳಿದ್ದಾರೆ.
ನೀವು ನಮಗೆ ದೇಶಭಕ್ತಿ, ದೇಶಪ್ರೇಮದ ಪಾಠವನ್ನು ಹೇಳಿಕೊಡುವುದು ಬೇಡ. ಅದನ್ನು ನಿಮ್ಮಿಂದ ಕಲಿಯುವ ದಿನವಿನ್ನೂ ಬಂದಿಲ್ಲ. ಡಿಮಾನಿಟೈಸೇಶನ್’ನನ್ನು ಬೆಂಬಲಿಸಿದವರು ದೇಶಪ್ರೇಮಿಗಳು, ಅದನ್ನು ವಿರೋಧಿಸಿದವರೆಲ್ಲಾ ದೇಶದ್ರೋಹಿಗಳು ಎನ್ನುವ ವಾತಾವರಣ ನಿರ್ಮಾಣವಾಗಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಹಿಂದುತ್ವಕ್ಕೋಸ್ಕರ ನಾವು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದು. ನಾವು ಅವರಿಗೆ ಪ್ರಯೋಜನಕ್ಕೆ ಬಾರದವರು ಎಂದು ಬಿಜೆಪಿ ನಾಯಕರಿಗೆ ಅನ್ನಿಸಿದರೆ ನಾವು ಮುಂದಿನ ಹೆಜ್ಜೆಯ ಬಗ್ಗೆ ಯೋಚಿಸುತ್ತೇವೆ ಎಂದು ಠಾಕ್ರೆ ಹೇಳಿದ್ದಾರೆ.
