ಇಂಧನ ಸಚಿವ ಡಿ,ಕೆ. ಶಿವಕುಮಾರ್ ನಿವಾಸದ ಮೇಲಿನ ದಾಳಿ ರಾಜಕೀಯ ಪ್ರೇರಿತ ಎಂಬ ಕಾಂಗ್ರೆಸ್ ಆರೋಪವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅಲ್ಲಗಳೆದಿದ್ದಾರೆ. ಈ ವಿಚಾರವಾಗಿ ಸಂಸತ್ತಿನ ಕೆಳಮನೆ ಹಾಗೂ ಮೇಲ್ಮನೆಯಲ್ಲಿ ಮಾತನಾಡಿದ ಜೇಟ್ಲಿ, ಐಟಿ ದಾಳಿಗಳ ಹಿಂದೆ ರಾಜಕೀಯ ದುರುದ್ಧೇಶವಿಲ್ಲವೆಂದು ಹೇಳಿದ್ದಾರೆ.

ನವದೆಹಲಿ: ಇಂಧನ ಸಚಿವ ಡಿ,ಕೆ. ಶಿವಕುಮಾರ್ ನಿವಾಸದ ಮೇಲಿನ ದಾಳಿ ರಾಜಕೀಯ ಪ್ರೇರಿತ ಎಂಬ ಕಾಂಗ್ರೆಸ್ ಆರೋಪವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅಲ್ಲಗಳೆದಿದ್ದಾರೆ.

ಗುಜರಾತ್ ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಸೇಡು ತೀರಿಸಲು ಬಿಜೆಪಿಯು ಡಿ,ಕೆ. ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ ನಡೆಸಲಾಗಿದೆ ಎಂದು ಕಾಂಗ್ರೆಸ್ ಇಂದು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದೆ.

ಈ ವಿಚಾರವಾಗಿ ಸಂಸತ್ತಿನ ಕೆಳಮನೆ ಹಾಗೂ ಮೇಲ್ಮನೆಯಲ್ಲಿ ಮಾತನಾಡಿದ ಜೇಟ್ಲಿ, ಐಟಿ ದಾಳಿಗಳ ಹಿಂದೆ ರಾಜಕೀಯ ದುರುದ್ಧೇಶವಿಲ್ಲವೆಂದು ಹೇಳಿದ್ದಾರೆ.

ಆದಾಯ ತೆರಿಗೆ ಇಲಾಖೆ ಏನೆಲ್ಲಾ ವಶಪಡಿಸುತ್ತದೋ ಅವುಗಳಿಂದ ಸರ್ಕಾರ ಅಧಿಕಾರದ ಬಳಕೆ ಮಾಡುತ್ತಿದೆಯೋ ಅಥವಾ ದುರ್ಬಳಕೆ ಮಾಡುತ್ತಿದೆಯೋ ಎಂಬುವುದು ತಿಳಿಯುವುದು ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ಶಿವಕುಮಾರ್ ನಿವಾಸ ಹಾಗೂ ಇನ್ನಿತರ ಕಡೆ ದಾಳಿಯು ಪೂರ್ವನಿಯೋಜಿತವಾಗಿತ್ತು ಎಂದು ಐಟಿ ಇಲಾಖೆಯು ಹೇಳಿದೆ.