ಇದು ಹಿಂದೂಸ್ತಾನ. ಇಲ್ಲಿ ಕನ್ನಡ ಕಲಿಯ ಬೇಕಿಲ್ಲ. ನಿಮಗೆ ಹಿಂದಿ ಬಾರದಿದ್ದರೆ ಗೆಟ್‌'ಔಟ್‌' ಎಂದು ಗದರಿಸಿ ಧಾಷ್ಟ್ರ್ಯ ಪ್ರದರ್ಶಿಸಿದ ವಿದ್ಯಮಾನ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ಘಟಿಸಿದೆ.
ಮಂಡ್ಯ(ಜೂ.24): ಒಂದೆಡೆ ಕೇಂದ್ರ ಸರ್ಕಾರಿ ನೌಕರಿಯಲ್ಲಿ ಹಿಂದಿ ಭಾಷಿಕರಿಗೆ ಆದ್ಯತೆ, ಮತ್ತೊಂದೆಡೆ ಅಂಚೆ ಕಚೇರಿ, ರೈಲ್ವೆ, ಬ್ಯಾಂಕು ಮತ್ತಿತರ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಹಿಂದಿ ಭಾಷೆಗೆ ಪ್ರಾಮುಖ್ಯತೆ, ಈಚೆಗಷ್ಟೇ ಬೆಂಗಳೂರಿನ ಮೆಟ್ರೋ ರೈಲಿನಲ್ಲೂ ಹಿಂದಿಗೆ ಮಹತ್ವ... ಹೀಗೆ ಹತ್ತು ಹಲವು ‘ಹಿಂದಿ ಹೇರಿಕೆ'ಗಳ ವಿರುದ್ಧ ಆಕ್ರೋಶ ಹೆಚ್ಚುತ್ತಿರುವ ನಡುವೆಯೇ ಕನ್ನಡಿಗರ ಸ್ವಾಭಿಮಾನ ಬಡಿದೆಬ್ಬಿಸುವಂತಹ ಘಟನೆಯೊಂದು ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇದಕ್ಕೆ ಕೆರಳಿದ ಸುನೀಲ್, ಇದು ಹಿಂದೂಸ್ತಾನ ಇಲ್ಲಿ ಕನ್ನಡ ಕಲಿಯಬೇಕಿಲ್ಲ. ಹಿಂದಿ ಬಾರದಿದ್ದರೆ ಹೊರ ಹೋಗಿ ಎಂದು ಧಾಷ್ಟ್ರ್ಯ ತೋರಿದ್ದಾನೆ. ಇದರಿಂದ ಕೆರಳಿದ ಗ್ರಾಹಕರು, ನಾವು ಹಳ್ಳಿ ಜನ. ನಮಗೆ ಕನ್ನಡವೇ ಓದಲು ಬರೆಯಲು ಬರೋದಿಲ್ಲ. ಇನ್ನು ಹಿಂದಿ ಕಲಿಯಲು ಎಲ್ಲಿಗೆ ಹೋಗೋಣ ಎಂದು ತರಾಟೆಗೆ ತೆಗೆದು ಕೊಂಡಿದ್ದಾರೆ. ಇದರಿಂದ ಕೆಲ ಕಾಲ ದಂಗಾದ ಬ್ಯಾಂಕ್ ಇತರ ಸಿಬ್ಬಂದಿ, ಸಂಧಾನ ಮಾಡಿಸಿ, ಪ್ರಕರಣವನ್ನು ಸಮಾಪ್ತಿ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗದಿದ್ದರೂ, ನಾಡಿನಾದ್ಯಂತ ಸುದ್ದಿಯಾಗಿದೆ.
