ನವದೆಹಲಿ :  ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿ, ಮುಂದಿನ ಚುನಾವಣೆಯಲ್ಲಿ ಯಾರೂ ಕೂಡ ಕ್ಷಮಿಸಬಾರದು ಎಂದು ಹೇಳಿದ್ದಾರೆ.  

2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಜನ ಕ್ಷಮಿಸುವುದಿಲ್ಲ.  ಅವರ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವುದು ಸಾಧ್ಯವಿಲ್ಲ. ಎಂದು ಯಶವಂತ್ ಸಿನ್ಹಾ ಹೇಳಿದ್ದಾರೆ.

 ಗುಜರಾತ್ ನ ಜುನಾಗಡ್ ವಂತಾಲಿ ಪ್ರದೇಶದಲ್ಲಿ ನಡೆದ ರೈತರ ಸಮಾವೇಶದಲ್ಲಿ ಮಾತನಾಡಿದ ಅವರು ಈ ರೀತಿಯಾಗಿ ಹೇಳಿದ್ದಾರೆ. 

ಈ ಸರ್ಕಾರ ಜನರ ಬೇಡಿಕೆಗಳನ್ನು, ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಈ ಸರ್ಕಾರ ಅವಧಿಯಲ್ಲಿ ಎಲ್ಲರೂ ಕೂಡ ಸಮಸ್ಯೆ ಎದುರಿಸುತ್ತಿದ್ದಾರೆ.  ಇದಕ್ಕೆ ಒಂದೇ ಪರಿಹಾರ ಎಂದರೆ ಮುಂದಿನ ಚುನಾವಣೆಯಲ್ಲಿ ಈ ಸರ್ಕಾರವನ್ನು ಬೇರು ಸಹಿತ ಕಿತ್ತು ಹಾಕುವುದೇ ಎಂದು ಹೇಳಿದ್ದಾರೆ. 

ನಾನು ಜನರಲ್ಲಿ ಕ್ಷಮೆ ಕೇಳುತ್ತೇನೆ. ಯಾಕೆಂದರೆ ಇಂತಹ ಭರವಸೆಗಳನ್ನು ನೀಡುವ ವೇಳೆ ನಾನು ಕೂಡ ಪಕ್ಷದ ಭಾಗವಾಗಿದ್ದೆ ಎಂದು ಹೇಳಿದ್ದಾರೆ.