ಡೆಲ್ಲಿಗೆ ಬರಬೇಡಿ: ಡಿಕೆಶಿ-ಸಿದ್ದರಾಮಯ್ಯಗೆ ಹೈಕಮಾಂಡ್ ಖಡಕ್ ಎಚ್ಚರಿಕೆ

First Published 4, Jun 2018, 5:28 PM IST
Dont Come To Delhi Says Congress High Command To D K Shivakumar Siddaramaiah
Highlights

ಸಚಿವ ಸ್ಥಾನದ ಲಾಬಿಗಾಗಿ ಡೆಲ್ಲಿಗೆ ಬರಬೇಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಖಡಕ್ ಎಚ್ಚರಿಕೆ ನೀಡಲಾಗಿದೆ ಎಂದು ವರದಿಯಾಗಿದೆ. 

ಬೆಂಗಳೂರು[ಜೂ.04]: ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿ 2 ವಾರಗಳು ಕಳೆದರೂ ಹೊಸ ಸರ್ಕಾರ ಸಚಿವ ಸಂಪುಟ ಕಸರತ್ತು ಬಗೆಹರಿದಿಲ್ಲ. ಚುನಾವಣೋತ್ತರ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್-ಜೆಡಿಎಸ್ ನಡುವೆ ಖಾತೆ ಹಂಚಿಕೆ ಕುರಿತ ಹಗ್ಗಾ-ಜಗ್ಗಾಟ ಬಗೆಹರಿದಿಲ್ಲ. ಇದರ ಬೆನ್ನಲ್ಲೇ ಸಚಿವ ಸ್ಥಾನದ ಲಾಬಿಗಾಗಿ ಡೆಲ್ಲಿಗೆ ಬರಬೇಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಖಡಕ್ ಎಚ್ಚರಿಕೆ ನೀಡಲಾಗಿದೆ ಎಂದು ವರದಿಯಾಗಿದೆ. 
ವಿವಿಧ ಸಚಿವ ಸ್ಥಾನಗಳಿಗೆ ಕಾಂಗ್ರೆಸ್ ಶಾಸಕರು ಸಾಕಷ್ಟು ಲಾಬಿ ನಡೆಸುತ್ತಿದ್ದು, ಸಂಪುಟ ವಿಸ್ತರಣೆ ಉಭಯ ಪಕ್ಷಗಳ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್’ನ ಹಿರಿಯ ಮುಖಂಡರಾದ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಇಂದು ಭೇಟಿ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಮೀಟಿಂಗ್ ದಿಢೀರ್ ಆಗಿ ರದ್ದಾಗಿದೆ ಎಂದು ವರದಿಯಾಗಿದೆ.
ಇನ್ನೊಂದು ಮೂಲಗಳ ಪ್ರಕಾರ ಇಂದು ಸಂಜೆ ರಾಹುಲ್ ಗಾಂಧಿಯ ಜತೆ ಕಾಂಗ್ರೆಸ್’ನ ಹಿರಿಯ ಮುಖಂಡರು ಮಾತುಕತೆ ನಡೆಸಲು ಡೆಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗುತ್ತಿದೆ.

loader