2012-13 ಮತ್ತು 2015-16ರ ನಡುವೆ ಕಾರ್ಪೊರೇಟ್ ಸಂಸ್ಥೆಗಳು 4 ಪ್ರಮುಖ ರಾಜಕೀಯ ಪಕ್ಷಗಳಿಗೆ 956.77 ಕೋಟಿ ರು. ದೇಣಿಗೆ ನೀಡಿವೆ. ಈ ಪೈಕಿ ಬಿಜೆಪಿ 2987 ಕಾರ್ಪೊರೆಟ್ ಸಂಸ್ಥೆಗಳಿಂದ ಅತ್ಯಧಿಕ 705.81 ಕೋಟಿ ರು. ದೇಣಿಗೆ ಪಡೆದಿದೆ ಎಂದು ಪ್ರಜಾಸತ್ತಾತ್ಮಕ ಸುಧಾರಣೆಗಳ ಸಂಸ್ಥೆ (ಎಡಿಆರ್) ವರದಿಯಲ್ಲಿ ತಿಳಿಸಲಾಗಿದೆ.
ನವದೆಹಲಿ(ಆ.18): 2012-13 ಮತ್ತು 2015-16ರ ನಡುವೆ ಕಾರ್ಪೊರೇಟ್ ಸಂಸ್ಥೆಗಳು 4 ಪ್ರಮುಖ ರಾಜಕೀಯ ಪಕ್ಷಗಳಿಗೆ 956.77 ಕೋಟಿ ರು. ದೇಣಿಗೆ ನೀಡಿವೆ. ಈ ಪೈಕಿ ಬಿಜೆಪಿ 2987 ಕಾರ್ಪೊರೆಟ್ ಸಂಸ್ಥೆಗಳಿಂದ ಅತ್ಯಧಿಕ 705.81 ಕೋಟಿ ರು. ದೇಣಿಗೆ ಪಡೆದಿದೆ ಎಂದು ಪ್ರಜಾಸತ್ತಾತ್ಮಕ ಸುಧಾರಣೆಗಳ ಸಂಸ್ಥೆ (ಎಡಿಆರ್) ವರದಿಯಲ್ಲಿ ತಿಳಿಸಲಾಗಿದೆ.
ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ವಿವರಗಳನ್ನಾಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಇದೇ ಅವಧಿಯಲ್ಲಿ ಕಾಂಗ್ರೆಸ್ 167 ಸಂಸ್ಥೆಗಳಿಂದ 198.16 ಕೋಟಿ ರು. ದೇಣಿಗೆ ಸ್ವೀಕರಿಸಿದೆ. ಎನ್‌ಸಿಪಿ 50.73 ಕೋಟಿ ರು., ಸಿಪಿಎಂ 1.89 ಕೋಟಿ ರು. ಮತ್ತು ಸಿಪಿಐ 0.18 ಕೋಟಿ ರು.ಗಳನ್ನು ದೇಣಿಗೆಯಾಗಿ ಕಾರ್ಪೊರೇಟ್ ಸಂಸ್ಥೆಗಳಿಂದ ಸ್ವೀಕರಿಸಿವೆ. ಬಿಎಸ್ಪಿ ಯಾವುದೇ ದೇಣಿಗೆ ಸ್ವೀಕರಿಸಿಲ್ಲ ಎಂದು ವರದಿ ತಿಳಿಸಿದೆ
ಈಗ ಚುನಾವಣೆ ನಡೆದರೆ ಎನ್‌ಡಿಎಗೆ 349 ಸ್ಥಾನ
ಲೋಕಸಭೆಗೆ ಈಗಲೇ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ 349 ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿಯೇ ಸ್ವಂತ ಬಲದಿಂದ 298 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲಿದೆ. ಯುಪಿಎ 75 ಸ್ಥಾನಗಳನ್ನು ಗೆಲ್ಲಲಿದ್ದು, ಇತರರು 119 ಸ್ಥಾನಗಳಲ್ಲಿ ಗೆಲ್ಲಲಿದ್ದಾರೆ ಎಂದು ಇಂಡಿಯಾ ಟುಡೇ ಗ್ರೂಪ್- ಕಾರ್ವಿ ಇನ್‌ಸೈಟ್ಸ್ ನಡೆಸಿದ ಸಮೀಕ್ಷೆ ‘ವಿಷ್ಯ ನುಡಿದಿದೆ.
