Asianet Suvarna News Asianet Suvarna News

ಕೇವಲ 1 ರೂ. ಕೊಡಿ ಸಾಕು: ಸೇನೆಗೆ ನಾವೆಲ್ಲಾ ಕೈ ಜೋಡಿಸಲೇಬೇಕು!

ಸೇನೆಯೊಂದಿಗೆ ಕೈ ಜೋಡಿಸುವ ಸುವರ್ಣಾವಕಾಶ| ಸೈನಿಕರ ನೆರವಿಗೆ ಬರಲು ಎಲ್ಲರಿಗೂ ಅವಕಾಶ| ಕೇಂದ್ರ ಸರ್ಕಾರದ ಯೋಜನೆಗೆ ಕೈ ಜೋಡಿಸೋಣ| ಕೇವಲ 1 ರೂ. ಕಾಣಿಕೆ ಸೈನ್ಯವನ್ನು ಬಲಾಢ್ಯಗೊಳಿಸಲಿದೆ| ಹುತಾತ್ಮರ ಕುಟುಂಬಕ್ಕೆ ನೆರವಾಗಲು ಕೈಜೋಡಿಸಿ| ಸೇನಾ ಬ್ಯಾಂಕ್ ಅಕೌಂಟ್‌ಗೆ ಕೇವಲ 1 ರೂ. ಕಾಣಿಕೆ|

Donate Rs. 1 to Indian Army Welfare Fund
Author
Bengaluru, First Published Feb 16, 2019, 2:39 PM IST

ನವದೆಹಲಿ(ಫೆ.16): ಸುಮ್ನೆ ಯೋಚನೆ ಮಾಡಿ. 130 ಕೋಟಿ ಜನಸಂಖ್ಯೆ ಇರೋ ಭಾರತದಲ್ಲಿ, ಕನಿಷ್ಠ 100 ಕೋಟಿ ಜನ ಕೇವಲ 1 ರೂ. ಅಂತಾ ಸೇನೆಗೆ ಕಾಣಿಕೆ ಕೊಟ್ಟರೆ ಕೇವಲ ಒಂದೇ ದಿನದಲ್ಲಿ 100 ಕೋಟಿ ರೂ. ಸಂಗ್ರಹವಾಗುತ್ತದೆ.

ಏನಿದು ಅಂತಾ ಯೋಚನೆ ಮಾಡ್ತಾ ಇದ್ದೀರಾ? ಹೌದು ಕೇಂದ್ರ ಸರ್ಕಾರ ಇಂತದ್ದೊಂದು ವಿಶೇಷ ಯೋಜನೆಯೊಂದನ್ನು ಈಗಾಗಲೇ ಜಾರಿಗೊಳಿಸಿದ್ದು, ಭಾರತೀಯ ಸೇನೆ ಮತ್ತು ಯುದ್ಧದಲ್ಲಿ ಗಾಯಗೊಂಡ ಸೈನಿಕರ ನೆರವಿಗೆ ಇಡೀ ಭಾರತವನ್ನು ಒಗ್ಗೂಡಿಸಿದೆ.

ಅದರಂತೆ ಭಾರತೀಯ ನಾಗರಿಕರು ಸೇನೆಯ ಅಧಿಕೃತ ಬ್ಯಾಂಕ್ ಅಕೌಂಟ್‌ಗೆ ಕೇವಲ 1 ರೂ. ಸಂದಾಯ ಮಾಡಬೇಕು. 100 ಕೋಟಿ ಜನ 1 ರೂ. ಸಂದಾಯ ಮಾಡಿದರೆ 100 ಕೋಟಿ ರೂ. ಸಂಗ್ರಹವಾಗುತ್ತದೆ. ತಿಂಗಳಿಗೆ 3,000 ಕೋಟಿ ಮತ್ತು ವರ್ಷಕ್ಕೆ 36,000 ಕೋಟಿ ರೂ. ಸಂಗ್ರಹವಾಗುತ್ತದೆ. ಇದು ಪಾಕಿಸ್ತಾನದ ವಾರ್ಷಿಕ ಸೇನಾ ಬಜೆಟ್‌ಗೆ ಸಮ.

ಇನ್ನು ಈ ಕುರಿತು ಖುದ್ದು ಭಾರತೀಯ ಸೇನೆ ಸ್ಪಷ್ಟನೆ ನೀಡಿದ್ದು, 2016ರಿಂದಲೇ ನವದೆಹಲಿಯ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ “Army Welfare Fund Battle Casualties” ಹೆಸರಿನ ಖಾತೆ ತೆರೆಯಲಾಗಿದೆ ಎಂದು ತಿಳಿಸಿದೆ.

Donate Rs. 1 to Indian Army Welfare Fund

ಅಲ್ಲದೇ ಸಿಂಡಿಕೇಟ್ ಬ್ಯಾಂಕ್ ಕೂಡ ಈ ಕುರಿತು ಸ್ಪಷ್ಟನೆ ನೀಡಿದ್ದು, ಇಂತದ್ದೊಂದು ಅಧಿಕೃತ ಅಕೌಂಟ್ ತೆರೆಯಲಾಗಿದೆ ಎಂದು ತಿಳಿಸಿದೆ. ಇನ್ನು ಬ್ಯಾಂಕ್ ಡಿಟೇಲ್ಸ್ ಈ ಕೆಳಗಿನಂತಿದೆ.


SYNDICATE BANK

A/C NAME: ARMY WELFARE FUND BATTLE CASUALTIES

A/C NO: 90552010165915

IFSC CODE: SYNB0009055

SOUTH EXTENSION BRANCH,NEW DELHI.

ಬನ್ನಿ ಸ್ನೇಹಿತರೇ, ಸೇನೆಯೊಂದಿಗೆ ಕೈಜೋಡಿಸೋಣ. ಹುತಾತ್ಮ ಯೋಧರ ಕುಟುಂಬಕ್ಕೆ ನೆರವಾಗೋಣ. ಕೇವಲ 1 ರೂ. ಕಾಣಿಕೆ ನಮ್ಮ ಸೈನ್ಯವನ್ನು, ನಮ್ಮ ಸೈನಿಕರನ್ನು ಮತ್ತಷ್ಟು ಬಲಾಢ್ಯಗೊಳಿಸುತ್ತದೆ. ಜೈ ಹಿಂದ್, ವಂದೇ ಮಾತರಂ.

Follow Us:
Download App:
  • android
  • ios