ಅವಹೇಳನ ಮಾಡಿದ ಪ್ರಕರಣ| ಜಾಮೀನಿಗೆ ಕುರಾನ್‌ನ 5 ಪ್ರತಿ ಹಂಚುವ ಷರತ್ತೊಡ್ಡಿದ ಕೋರ್ಟ್|
ರಾಂಚಿ[ಜು.17]: ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಮರನ್ನು ಅವಹೇಳನ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ 19 ವರ್ಷದ ಯುವತಿಯೊಬ್ಬಳಿಗೆ ಸ್ಥಳೀಯ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ. ಆದರೆ ಜಾಮೀನು ನೀಡುವುದಕ್ಕೂ ಮುನ್ನ, ಕುರಾನ್‌ನ 5 ಪ್ರತಿಗಳನ್ನು ಆಕೆ ಉಚಿತವಾಗಿ ಹಂಚಬೇಕು ಎಂದು ಷರತ್ತು ಒಡ್ಡಿದೆ.
ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಸ್ಥಳೀಯ ಅಂಜುಮನ್ ಸಮಿತಿ ಸೇರಿದಂತೆ 5 ಜನರಿಗೆ ಬಂಧಿತೆ ರಿಚಾ ಭಾರತಿ ಕುರಾನ್‌ನ ಪ್ರತಿ ಹಂಚಬೇಕು ಎಂದು ನ್ಯಾಯಾಧೀಶ ಮನೀಶ್ ಕುಮಾರ್ ಸಿಂಗ್ ಷರತ್ತು ಒಡ್ಡಿದ್ದಾರೆ.
ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಮಾತನಾಡಿದ ರಿಚಾ, ಇಂದು ಕುರಾನ್ ಹಂಚಲು ಹೇಳುತ್ತಾರೆ, ನಾಳೆ ಇಸ್ಲಾಂ ಸೇರುವಂತೆ ನ್ಯಾಯಾಧೀಶರು ಸೂಚಿಸುತ್ತಾರೆ ಎಂದು ಕಿಡಿಕಾರಿದ್ದಾರೆ.
