ಅಂಚೆ ಪತ್ರದಲ್ಲಿ ವಿಷಕಾರಿ ಅಂಶ, ಟ್ರಂಪ್ ಸೊಸೆ ಆಸ್ಪತ್ರೆಗೆ : ಅಂಥ್ರಾಕ್ಸ್ ಶಂಕೆ ?

Donald Trumps daughter in law Vanessa Trump hospitalised
Highlights

ತಮ್ಮ ಪತ್ನಿ ಹಾಗೂ ಪುತ್ರರು ಆರೋಗ್ಯವಾಗಿದ್ದು ಪತ್ರ ಕಳಿಸಿರುವವರ ನಡೆ ನಿಜವಾಗಿಯೂ ಅಸಹ್ಯ ಹುಟ್ಟಿಸುವಂತಿದೆ ಎಂದು ಜೂ.ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯೂಯಾರ್ಕ್(ಫೆ.13): ಅಂಚೆಪತ್ರವನ್ನು ತೆರೆದ ನಂತರ ಅನಾರೋಗ್ಯಕ್ಕೀಡಾದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೊಸೆ ವನಿಸ್ಸಾ ಟ್ರಂಪ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಟ್ರಂಪ್ ಅವರ ಮೊದಲ ಪುತ್ರ ಜೂ.ಟ್ರಂಪ್ ಅವರ ಪತ್ನಿ ವನಿಸ್ಸಾ ಇಂದು ಬೆಳಿಗ್ಗೆ 10 ಗಂಟೆಗೆ ಸಂಶಯಾದತ್ಮ ಪತ್ರವನ್ನು ತೆರೆದು ನೋಡಿದಾಗ ಅಸ್ವಸ್ಥಗೊಳಗಾಗಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಯಾವುದೇ ಅನಾಹುತ ಸಂಭವಿಸದೆ ಅಪಾಯದಿಂದ ಪಾರಾಗಿದ್ದಾರೆ.

ತಮ್ಮ ಪತ್ನಿ ಹಾಗೂ ಪುತ್ರರು ಆರೋಗ್ಯವಾಗಿದ್ದು ಪತ್ರ ಕಳಿಸಿರುವವರ ನಡೆ ನಿಜವಾಗಿಯೂ ಅಸಹ್ಯ ಹುಟ್ಟಿಸುವಂತಿದೆ ಎಂದು ಜೂ.ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೆರಿಕಾ ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಮೊದಲಿಗೆ ಇದನ್ನು ಅಂಥ್ರಾಕ್ಸ್ ಎಂದು ನಂಬಲಾಗಿತ್ತು. ಆದರೆ ಪತ್ರದಲ್ಲಿ ಅಂಥ್ರಾಕ್ಸ್'ನ ಯಾವುದೇ ಲಕ್ಷಣಗಳಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. 2001ರಲ್ಲಿ ಶ್ವೇತಭವನಕ್ಕೆ ಅಂಚೆ ಮೂಲಕ ಅಂಥ್ರಾಕ್ಸ್ ರೋಗಾಣುಗಳನ್ನು ಕಳಿಸಲಾಗಿತ್ತು. ಇದರಿಂದ ಐವರು ಸಾವನ್ನಪ್ಪಿದ್ದರು. ಅಂದಿನಿಂದ ಯಾವುದೇ ಅಂಚೆ ಬಂದರೂ ಹೆಚ್ಚು ಪರಿಶೀಲನೆಗೆ ಒಳಪಡಿಸಲಾಗುತ್ತದೆ.

loader