89 ನೇ ಅಕಾಡೆಮಿ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭವು ಡೊನಾಲ್ಡ್ ಟ್ರಂಪ್ ಹಾಗೂ ಅವರ ಇತ್ತೀಚಿನ ರಾಜಕೀಯ ನೀತಿಗಳನ್ನು ಟೀಕಿಸುವ ವೇದಿಕೆಯನ್ನಾಗಿಸಿತು.
ನವದೆಹಲಿ (ಫೆ.27): 89 ನೇ ಅಕಾಡೆಮಿ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭವು ಡೊನಾಲ್ಡ್ ಟ್ರಂಪ್ ಹಾಗೂ ಅವರ ಇತ್ತೀಚಿನ ರಾಜಕೀಯ ನೀತಿಗಳನ್ನು ಟೀಕಿಸುವ ವೇದಿಕೆಯನ್ನಾಗಿಸಿತು.
ಜಿಮ್ಮಿ ಕೆಮೆಲ್, ಅಸ್ಘರ್ ಫರ್ಹಾದಿ ಸೇರಿದಂತೆ ಕೆಲವು ಸೆಲೆಬ್ರಿಟಿಗಳು ಟ್ರಂಪ್ ಬಗ್ಗೆ ವೇದಿಕೆಯಲ್ಲೇ ಮುಕ್ತವಾಗಿ ಟೀಕಿಸಿದರು.
ಕಳೆದ ವರ್ಷ ಬಿಳಿಯೇತರರಿಗೆ ಆಸ್ಕರ್ ಪ್ರಶಸ್ತಿಗೆ ನಾಮಾಂಕಿತಗೊಳಿಸದೇ ಜನಾಂಗೀಯ ತಾರತಮ್ಯ ಮಾಡಿದ್ದರು. ಆದರೆ ಈ ಬಾರಿ ಜನಾಂಗೀಯ ಹೋಲಿಕೆ ಕಡಿಮೆಯಿತ್ತು. ನಾನು ಟ್ರಂಪ್ ಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಕೆಮೆಲ್ ಹೇಳಿದ್ದಾರೆ.
‘ಬೆಸ್ಟ್ ಫಾರಿನ್ ಚಿತ್ರ’ ಕ್ಯಾಟಗರಿಯಲ್ಲಿ ಇರಾನ್ ನಿರ್ದೇಶಕ ಅಜ್ಗರ್ ಫರ್ಹಾದಿ ನಿರ್ದೇಶನದ ದಿ ಸೆಲ್ಸ್ ಮ್ಯಾನ್ ಪ್ರಶಸ್ತಿ ಗೆದ್ದಿದೆ ಆದರೆ ಅಜ್ಗರ್ ಫರ್ಹಾದಿ ಸಮಾರಂಭದಲ್ಲಿ ಭಾಗವಹಿಸಲಿಲ್ಲ. ಇವರ ದೇಶ ಇರಾನ್ ಸೇರಿದಂತೆ 6 ಮುಸಲ್ಮಾನ ದೇಶಗಳ ಮೇಲೆ ಟ್ರಂಪ್ ನಿಷೇಧ ಹೇರಿದ್ದು ಇವರ ಅನುಪಸ್ಥಿತಿಗೆ ಕಾರಣ ಎನ್ನಲಾಗಿದೆ.
