H1B ವೀಸಾ ಹಿಂಪಡೆದ ಬೆನ್ನಲ್ಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಗ್ರಗಾಮಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ವಾಷಿಂಗ್ಟನ್(ಸೆ.20): H1B ವೀಸಾ ಹಿಂಪಡೆದ ಬೆನ್ನಲ್ಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಗ್ರಗಾಮಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ಸಂಸತ್ತಿನಲ್ಲಿ ಮಾತನಾಡಿದ ಟ್ರಂಪ್ ನಾರ್ತ್ ಕೊರಿಯಾ ಮತ್ತು ಇರಾನ್ ದೇಶಗಳು ರಾಕ್ಷಸ ರಾಷ್ಟ್ರಗಳಂತೆ ವರ್ತಿಸ್ತಿವೆ. ಒಂದು ವೇಳೆ ಉತ್ತರ ಕೊರಿಯಾದ ಉದ್ಧಟತನ ಹೀಗೆ ಮುಂದುವರೆದರೆ, ನಮ್ಮ ಮಿತ್ರರಾಷ್ಟ್ರಗಳೇನಾದರೂ ಉತ್ತರ ಕೊರಿಯಾ ವಿರುದ್ಧ ಧ್ವನಿ ಎತ್ತಿದರೆ, ಉತ್ತರ ಕೊರಿಯಾವನ್ನು ನಾಶ ಮಾಡಲೂ ಯೋಚಿಸಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಆತ್ಮಹತ್ಯಾ ಸಿದ್ಧಾಂತ ಪಾಲನೆಯಲ್ಲಿ ರಾಕೆಟ್ ಮ್ಯಾನ್ ಆಗಿದ್ದಾರೆ. ಇತ್ತೀಚೆಗೆ ಕೆಲ ದೇಶಗಳು ದುಷ್ಕೃತ್ಯ, ಉಗ್ರವಾದಗಳಿಗೆ ಮಾರು ಹೋಗ್ತಿವೆ. ಅಂತಾ ದೇಶಗಳನ್ನ ಅಮೆರಿಕ ಎಂದಿಗೂ ಬೆಂಬಲಿಸುವುದಿಲ್ಲ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
