Asianet Suvarna News Asianet Suvarna News

ಇನ್ಮೇಲೆ ಟ್ಯಾಲೆಂಟ್ ಇದ್ರಷ್ಟೇ ಅಮೆರಿಕಕ್ಕೆ ಎಂಟ್ರಿ: ಟ್ರಂಪ್!

ಪ್ರತಿಭೆ ಇದ್ದವರೆಷ್ಟೇ ಅಮೆರಿಕಕ್ಕೆ ಬನ್ನಿ ಎಂದ ಟ್ರಂಪ್! ಪ್ರತಿಭೆ ಇದ್ದವರಿಂದ ಅಮೆರಿಕಕ್ಕೆ ಅನುಕೂಲ! ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೊಸ ನೀತಿ! ಇನ್ಮೇಲೆ ಪ್ರತಿಭೆ ಇದ್ದವರಿಗಷ್ಟೇ ಮಣೆ ಹಾಕುತ್ತಂತೆ ಅಮೆರಿಕ

Donald Trump Explains Eligibility Criteria for Enter to US
Author
Bengaluru, First Published Oct 14, 2018, 5:07 PM IST
  • Facebook
  • Twitter
  • Whatsapp

ವಾಷಿಂಗ್ಟನ್(ಅ.14): ಪ್ರತಿಭೆ ಇದ್ದವರಿಂದ ದೇಶಕ್ಕೆ ಅನುಕೂಲವಾಗಲಿದ್ದು, ಅಂತಹವರು ಮಾತ್ರ ಅಮೆರಿಕಾಕ್ಕೆ ಬನ್ನಿ, ಆದರೆ,  ಕಾನೂನುಬಾಹಿರವಾಗಿ ದೇಶದೊಳಗೆ ನುಸುಳಲು ಪ್ರಯತ್ನಿಸಬೇಡಿ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಗಡಿ ಭದ್ರತೆ ವಿಚಾರದಲ್ಲಿ ತಮ್ಮ ಸರ್ಕಾರ ಯಾವುದೇ ರಾಜಿಗೆ ಸಿದ್ಧವಿಲ್ಲ ಎಂದು ಹೇಳಿರುವ ಟ್ರಂಪ್, ನ್ಯಾಯಯುತ ರೀತಿಯಲ್ಲಿ  ದೇಶದೊಳಗೆ ಬನ್ನಿ ಎಂದು ವಿದೇಶಿಗರಿಗೆ ಸಲಹೆ ನೀಡಿದ್ದಾರೆ. 

ಪ್ರತಿಭೆ  ಆಧಾರದ ಮೇಲೆ ದೇಶಕ್ಕೆ ಬರುವವರನ್ನು ಸ್ವಾಗತಿಸುವುದಾಗಿ ಹೇಳಿರುವ ಟ್ರಂಪ್, ಇದರಿಂದಾಗಿ ಭಾರತದಂತಹ ತಂತ್ರಜ್ಞಾನ ವೃತ್ತಿಪರರಿಗೆ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕಾಕ್ಕೆ ಅತಿ ಹೆಚ್ಚಿನ ಸಂಖ್ಯೆಯ ಜನರು ವಲಸೆ ಬರುತ್ತಾರೆ. ನಮ್ಮ ದೇಶದಲ್ಲಿ ವಿವಿಧ ಕ್ಷೇತ್ರದ ಅತ್ಯುನ್ನತ ಕಂಪನಿಗಳಿವೆ.  ದೇಶಕ್ಕೆ ಜನರ ಅಗತ್ಯವಿದ್ದು, ಪ್ರತಿಭೆ ಇದ್ದವರಿಗೆ ಮಾತ್ರ ಮಣೆ ಹಾಕಲಾಗುವುದು ಎಂದು ಟ್ರಂಪ್ ಅಮೆರಿಕ ಕುರಿತ ತಮ್ಮ ಭವಿಷ್ಯದ ದೃಷ್ಟಿಕೋನವನ್ನು ತೆರೆದಿಟ್ಟಿದ್ದಾರೆ.

Follow Us:
Download App:
  • android
  • ios