ಜಗತ್ತಿನ ಅತ್ಯಂತ ಶಕ್ತಿಶಾಲಿ ರಾಷ್ಟ್ರವೆಂದೇ ಖ್ಯಾತಿ ಪಡೆದ, ಅಮೆರಿಕಾ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಟ್ ಹೌಸ್'ನಲ್ಲಿ ಟ್ರಕ್ ಡ್ರೈವಿಂಗ್ ಮಾಡಿದರೆ ನಿಮಗೇನನಿಸುತ್ತದೆ? ಇದು ಅಸಾಧ್ಯ ಅಂತ ಅಂದುಕೊಳ್ಳುತ್ತೀರಲ್ಲವೇ? ಆದರೆ ಎಲ್ಲರ ಊಹೆಯನ್ನೂ ಸುಳ್ಳಾಗಿಸುವ ಫೋಟೋಗಳು ಇದೀಗ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿವೆ. ಇನ್ನೂ ಇದಕ್ಕೂ ಅಚ್ಚರಿಯುತ ವಿಷಯವೆಂದರೆ ಇವರು ಈ ಟ್ರಕ್ಕ್'ನ್ನು ವೈಟ್ ಹೌಸ್'ನ ಆವರಣದಲ್ಲೇ ಚಲಾಯಿಸಿರುವುದು!
ವಾಷಿಂಗ್ಟನ್(ಮಾ.24): ಜಗತ್ತಿನ ಅತ್ಯಂತ ಶಕ್ತಿಶಾಲಿ ರಾಷ್ಟ್ರವೆಂದೇ ಖ್ಯಾತಿ ಪಡೆದ, ಅಮೆರಿಕಾ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಟ್ ಹೌಸ್'ನಲ್ಲಿ ಟ್ರಕ್ ಡ್ರೈವಿಂಗ್ ಮಾಡಿದರೆ ನಿಮಗೇನನಿಸುತ್ತದೆ? ಇದು ಅಸಾಧ್ಯ ಅಂತ ಅಂದುಕೊಳ್ಳುತ್ತೀರಲ್ಲವೇ? ಆದರೆ ಎಲ್ಲರ ಊಹೆಯನ್ನೂ ಸುಳ್ಳಾಗಿಸುವ ಫೋಟೋಗಳು ಇದೀಗ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿವೆ. ಇನ್ನೂ ಇದಕ್ಕೂ ಅಚ್ಚರಿಯುತ ವಿಷಯವೆಂದರೆ ಇವರು ಈ ಟ್ರಕ್ಕ್'ನ್ನು ವೈಟ್ ಹೌಸ್'ನ ಆವರಣದಲ್ಲೇ ಚಲಾಯಿಸಿರುವುದು!
ವಾಸ್ತವವಾಗಿ ಗುರುವಾರದಂದು ಡೊನಾಲ್ಡ್ ಟ್ರಂಪ್ ಹೆಲ್ತ್ ಕೇರ್ ಬಿಲ್'ನಲ್ಲಿ ತಂದಿರುವ ಬದಲಾವಣೆಯನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಟ್ರಕ್ ಡ್ರೈವರ್ ಹಾಗೂ ಇದಕ್ಕೆ ಸಂಬಂಧಿಸಿದ ಪ್ರತಿನಿಧಿಗಳನ್ನು ಭೇಟಿಯಾಗಿದ್ದರು. ಈ ವೇಳೆ ಇವರು ವೈಟ್ ಹೌಸ್'ನ ಆವರಣದಲ್ಲಿ ಪಾರ್ಕ್ ಮಾಡಿದ್ದ ಟ್ರಕ್'ನ ಡ್ರೈವಿಂಗ್ ಸೀಟ್'ನಲ್ಲಿ ಕುಳಿತು ಕೆಲ ಸಮಯ ಕಳೆದರು. ಅಲ್ಲದೇ ಅಲ್ಲಿ ಟ್ರಕ್ ಡ್ರೈವರ್'ಗಳಂತೆ ಉತ್ಸುಕತೆಯಿಂದ ಹಾರ್ನ್ ಕೂಡಾ ಮಾಡಿದರು. ಆದರೆ ಟ್ರಕ್ ಚಲಾಯಿಸಿಲ್ಲವಾದರೂ, ಟ್ರೈವ್ ಮಾಡುವಂತೆ ಫೋಸ್ ನೀಡಿದ್ದಲ್ಲದೇ ವಿವಿಧ ಭಂಗಿಯಲ್ಲಿ ಕುಳಿತು ಮಜಾ ಮಾಡಿದ್ರು.
ಈ ಪೋಟೋಗಳು ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ #TrumpTruck ಎಂಬ ಹ್ಯಾಷ್ ಟ್ಯಾಗ್ ಅಡಿಯಲ್ಲಿ ವೈರಲ್ ಆಗುತ್ತಿವೆ. ಇವುಗಳಲ್ಲಿ ಕೆಲವರು ಅಮೆರಿಕಾ ಅಧ್ಯಕ್ಷರನ್ನು ಠೀಕಿಸಿದರೆ ಇನ್ನು ಕೆಲವರು ಸಮರ್ಥಿಸಿಕೊಂಡಿದ್ದಾರೆ.
