ವಾಷಿಂಗ್ಟನ್‌[ಆ.22]: ಗ್ರೀನ್‌ಲ್ಯಾಂಡ್‌ ದ್ವೀಪವನ್ನು ಮಾರಾಟ ಮಾಡುವುದಕ್ಕೆ ಡೆನ್ಮಾರ್ಕ್ ನಿರಾಸಕ್ತಿ ತೋರಿಸಿದ್ದರಿಂದ ಉದ್ದೇಶಿತ ಅಮೆರಿಕ ಹಾಗೂ ಡೆನ್ಮಾರ್ಕ್ ನಡುವಿನ ಮಾತುಕತೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದೂಡಿದ್ದಾರೆ.

ಈ ಬಗ್ಗೆ ಅವರು ಟ್ವೀಟ್‌ ಮಾಡಿದ್ದು, ಗ್ರೀನ್‌ಲ್ಯಾಂಡ್‌ ಮಾರಾಟ ವಿಚಾರದಲ್ಲಿ ಡೆನ್ಮಾರ್ಕ್ ಪ್ರಧಾನಿ ಮೆಟ್ಟಿಫೆಡೆರಿಕ್ಸನ್‌ ನಿರಾಸಕ್ತಿ ತೋರಿದ್ದರಿಂದ, ಮುಂದಿನ ಎರಡು ವಾರದೊಳಗೆ ನಡೆಯಬೇಕಿದ್ದ ಅಮೆರಿಕ- ಡೆನ್ಮಾರ್ಕ್ ಸಭೆ ಮುಂದೂಡಲಾಗಿದೆ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ನೇರವಾಗಿ ಹೇಳುವ ಮೂಲಕ ಫೆಡೆರಿಕ್ಸನ್‌ ವೆಚ್ಚ ಮತ್ತು ಶ್ರಮ ಎರಡನ್ನೂ ಉಳಿತಾಯ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ನಿರ್ಧಾರ ಬದಲಾಯಿಸಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ ಎಂದು ಟ್ರಂಪ್‌ ಪರೋಕ್ಷವಾಗಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಅಮೆರಿಕದಿಂದ ವಿಶ್ವದ ಅತಿದೊಡ್ಡ ದ್ವೀಪ ಗ್ರೀನ್‌ಲ್ಯಾಂಡ್‌ ಖರೀದಿ?

ಡೆನ್ಮಾರ್ಕ್ ಆಡಳಿತದಲ್ಲಿರುವ ಗ್ರೀನ್‌ ಲ್ಯಾಂಡ್‌ ದ್ವೀಪವನ್ನು ಖರೀದಿ ಮಾಡಲು ಅಮೆರಿಕ ಆಸಕ್ತಿ ವ್ಯಕ್ತಪಡಿಸಿತ್ತು.