ತಾವು ಆಡಳಿತ ಆರಂಭಿಸಿದ ದಿನದಿಂದ ಈ ಸುದ್ದಿ ಮಾಧ್ಯಮಗಳು ಹಾಗೂ ಟೆಲಿವಿಷನ್ ಮಾಧ್ಯಮಗಳು ಶ್ವೇತಭವನವನ್ನು ಅವ್ಯವಸ್ಥೆಗೆ ದೂಡಿವೆ. ಸರ್ಕಾರ ಹಾಗೂ ಸಮಾಜವನ್ನು ಸರಿದಾರಿಗೆ ತರಬೇಕಾದ ಈ ಮಾಧ್ಯಮಗಳು ಶ್ವೇತಭವನದಲ್ಲಿ ಎಲ್ಲವು ಸರಿಯಾಗಿದ್ದರೂ ಅತಂತ್ರ ಸೃಷ್ಟಿಸಿವೆ.

ವಾಷಿಂಗ್ಟನ್(ಫೆ.18): ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 5 ಮಾಧ್ಯಮಗಳನ್ನು ಅಮೆರಿಕಾ ದೇಶದ ಶತ್ರುಗಳು ಎಂದು ಖಂಡಿಸಿದ್ದಾರೆ.

ಅಂತರರಾಷ್ಟ್ರೀಯ ಮಾಧ್ಯಮಗಳು ಎಂದು ಕರೆಸಿಕೊಂಡು ಸುಳ್ಳು ಸುದ್ದಿ ನೀಡುವ ನ್ಯೂಯಾರ್ಕ್ ಟೈಮ್ಸ್, ಎನ್'ಬಿಸಿ ನ್ಯೂಸ್, ಎಬಿಸಿ ನ್ಯೂಸ್, ಸಿಬಿಎಸ್ ಹಾಗೂ ಸಿಎನ್'ಎನ್' ನನ್ನ ಶತ್ರುಗಳಲ್ಲ ಬದಲಿಗೆ ಅಮೆರಿಕಾ ಜನರ ಶತ್ರುಗಳು ಎಂದು ಕಿಡಿಕಾರಿದ್ದಾರೆ.

ತಾವು ಆಡಳಿತ ಆರಂಭಿಸಿದ ದಿನದಿಂದ ಈ ಸುದ್ದಿ ಮಾಧ್ಯಮಗಳು ಹಾಗೂ ಟೆಲಿವಿಷನ್ ಮಾಧ್ಯಮಗಳು ಶ್ವೇತಭವನವನ್ನು ಅವ್ಯವಸ್ಥೆಗೆ ದೂಡಿವೆ. ಸರ್ಕಾರ ಹಾಗೂ ಸಮಾಜವನ್ನು ಸರಿದಾರಿಗೆ ತರಬೇಕಾದ ಈ ಮಾಧ್ಯಮಗಳು ಶ್ವೇತಭವನದಲ್ಲಿ ಎಲ್ಲವು ಸರಿಯಾಗಿದ್ದರೂ ಅತಂತ್ರ ಸೃಷ್ಟಿಸಿವೆ.

ತಮ್ಮ ಸಾಧನೆಗಳನ್ನು ಈ ಮಾಧ್ಯಮಗಳು ಪ್ರಚುರಪಡಿಸುವಲ್ಲಿ ವಿಫಲವಾಗಿವೆ ಟ್ರಂಪ್ ತಿಳಿಸಿದ್ದಾರೆ. ಟ್ರಂಪ್ ಈ 5 ಮಾಧ್ಯಮಗಳನ್ನು ಟೀಕಿಸಿದ ಟ್ವೀಟನ್ನು ಕೆಲವೇ ಗಂಟೆಗಳಲ್ಲಿ 28 ಸಾವಿರಕ್ಕೂ ಹೆಚ್ಚು ಮಂದಿ ರಿಟ್ವೀಟ್ ಮಾಡಿದ್ದರೆ, 53 ಸಾವಿರ ಬಾರಿ ಫಾರ್ವಡ್ ಆಗಿದೆ, ಅಲ್ಲದೆ 85 ಸಾವಿರ ಮಂದಿ ಲೈಕ್ ಮಾಡಿದ್ದಾರೆ.