ಪಾಕಿಸ್ತಾನದ ಟಿವಿ ಚಾನೆಲ್ 'ನಿಯೋ ನ್ಯೂಸ್' ಬಿತ್ತರಿಸಿದ ಸುದ್ದಿಯೊಂದರಲ್ಲಿ ಟ್ರಂಪ್ ಪಾಕಿಸ್ತಾನದಲ್ಲಿ ಜನಿಸಿದ್ದು, ಅವರ ಮೂಲ ಹೆಸರು 'ದಾವುದ್ ಇಬ್ರಾಹಿಂ ಖಾನ್'. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ವಜಿರಿಸ್ತಾನದ ಮದರಸಾವೊಂದರಲ್ಲಿ ಪಡೆದಿದ್ದು, 1954ರ ರಸ್ತೆ ಅಪಘಾತವೊಂದರಲ್ಲಿ ಟ್ರಂಪ್ ಹೆತ್ತವರು ಅಸು ನೀಗಿದರು' ಎಂದು ವರದಿ ಮಾಡಿದೆ.

ಇಸ್ಲಮಾಬಾದ್(ನ.11): ಸಮೀಕ್ಷೆಗಳ ವರದಿಯನ್ನು ಸುಳ್ಳಾಗಿಸಿ ಡೊನಾಲ್ಡ್ ಟ್ರಂಪ್ ಅಮೆರಿಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಪ್ರತಿಯೊಬ್ಬರನ್ನೂ ಅಚ್ಚರಿಗೀಡು ಮಾಡಿತ್ತು. ಮತ್ತೊಂದೆಡೆ ಮುಂದಿನ ದಿನಗಳಲ್ಲಿ ಟ್ರಂಪ್ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಯೋಚನೆಯೂ ಜನರನ್ನು ಕಾಡಲಾರಂಭಿಸಿದೆ. ಆದರೆ ಇವೆಲ್ಲದರ ಮಧ್ಯೆ ಪಾಕಿಸ್ತಾನದ ಮಾಧ್ಯಮವೊಂದು ತನ್ನ ಹುಚ್ಚಾಟವನ್ನು ಪ್ರದರ್ಶಿಸಿದೆ.

ಪಾಕಿಸ್ತಾನದ ಟಿವಿ ಚಾನೆಲ್ 'ನಿಯೋ ನ್ಯೂಸ್' ಬಿತ್ತರಿಸಿದ ಸುದ್ದಿಯೊಂದರಲ್ಲಿ ಟ್ರಂಪ್ ಪಾಕಿಸ್ತಾನದಲ್ಲಿ ಜನಿಸಿದ್ದು, ಅವರ ಮೂಲ ಹೆಸರು 'ದಾವುದ್ ಇಬ್ರಾಹಿಂ ಖಾನ್'. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ವಜಿರಿಸ್ತಾನದ ಮದರಸಾವೊಂದರಲ್ಲಿ ಪಡೆದಿದ್ದು, 1954ರ ರಸ್ತೆ ಅಪಘಾತವೊಂದರಲ್ಲಿ ಟ್ರಂಪ್ ಹೆತ್ತವರು ಅಸು ನೀಗಿದರು' ಎಂದು ವರದಿ ಮಾಡಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪಾಕಿಸ್ತಾನದ ಚಾನೆಲ್ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ.