ಬ್ಯಾಂಕಾಕ್(ಜು. 30)  ತೈಲ ಸಾಗಾಟ ಮಾಡುತ್ತಿದ್ದದ ಹಡಗಿನಲ್ಲಿ ಇದ್ದವರ ಕಣ್ಣಿಗೆ ಸಮುದ್ರದ ಮಧ್ಯದಲ್ಲಿ ಈಜುತ್ತಿದ್ದ ನಾಯಿಯೊಂದು ಕಣ್ಣಿಗೆ ಬಿದ್ದಿದೆ. ಕಣ್ಣಿಗೆ ಬಿದ್ದ ತಕ್ಷಣವೇ ಶ್ವಾನವನ್ನು ರಕ್ಷಣೆ ಮಾಡಲಾಗಿದೆ.

ಸಮುದ್ರದ ಒಳಗೆ ಸುಮಾರು ಇನ್ನೂರಾ ಇಪ್ಪತ್ತು ಕಿಮೀ ಒಳಗೆ ಶ್ವಾನ ಪತ್ತೆಯಾಗಿದೆ. ಸಮುದ್ರದ ಮಧ್ಯದಲ್ಲಿ ಪತ್ತೆಯಾದ ಶ್ವಾನ ಎಲ್ಲಿಂದ ಬಂತು ಎಂಬುದಕ್ಕೆ ಮಾತ್ರ ಉತ್ತರ ಇಲ್ಲ. 

ನಿಜವಾಯ್ತು ಮಕ್ಕಳ ಸ್ಟೋರಿ: ಅತ್ತೆಗಾಗಿ ತಲೆ ಬೋಳಿಸಿಕೊಂಡ ಬೆಂಗಳೂರಿನ ಸೊಸೆ

ಬರೋಬ್ಬರಿ ಎರಡನೂರಾ ಇಪ್ಪತ್ತು ಕಿಮೀ ಸಂಚರಿಸಿದ್ದಾದರೂ ಹೇಗೆ? ಅಚ್ಚರಿಯ ಜತೆಗೆ ಇದೊಂದು ಸಾಹಸದ ಕತೆ. ಮೂಕ ಪ್ರಾಣಿ ಇದೀಗ ಚೇತರಿಸಿಕೊಳ್ಳುತ್ತಿದೆ.

ಚೆವೋರನ್ ಎಂಬ ಸಂಸ್ಥೆಯ ವಿಟಿಸಾಕ್ ಪಾಯಾಲವ್ ಎಂಬುವರು ಈ ಶ್ವಾನವನ್ನು ಮೊದಲು ಕಂಡವರು. ಈಜುತ್ತಲೇ ಇದ್ದ ನಾಯಿಯನ್ನು ಹಗ್ಗ ಮತ್ತಿತರ ಪರಿಕರ ಬಳಸಿ ರಕ್ಷಣೆ ಮಾಡಲಾಗಿದೆ. 

ನಾಯಿ ರಕ್ಷಣೆ ಮಾಡಿ ಅದಕ್ಕೆ ಸ್ನಾನ ಮಾಡಿಸಿ ಆರೈಕೆ ಮಾಡಲಾಗಿದೆ. ಪಶುವೈದ್ಯರು ಸಹ ತಪಾಸಣೆ ನಡೆಸಿದ್ದು ಪ್ರಾಣಕ್ಕೆ ಯಾವುದೆ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ.

ನಾಯಿ ನಮಗೆ ಸೇರಿದ್ದು ಎಂದು ಇಲ್ಲಿಯವರೆಗೆ ಯಾರೂ ಬಂದಿಲ್ಲ. ವಿಟಿಸಾಕ್ ಈ ಶ್ವಾನವನ್ನು ದತ್ತು ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ. ಆದರೆ ಸಮುದ್ರ ಮಧ್ಯದಲ್ಲಿ ಶ್ವಾನ ಹೇಗೆ ಪತ್ತೆಯಾಯಿತು ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ಮಾಲೀಕನ ಜತೆಗಿದ್ದ ನಾಯಿ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದಿರಬಹುದು. ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಸಮುದ್ರಕ್ಕೆ ಬಿದ್ದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.