ಡಿವೈಎಸ್​ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಸಾಕ್ಷ್ಯನಾಶ ಪೊಲೀಸರಿಂದಲೇ ನಡೆದಿದೆ ಎಂಬ ಸ್ಫೋಟಕ ಮಾಹಿತಿ ಸುವರ್ಣ ನ್ಯೂಸ್​ಗೆ ಲಭ್ಯವಾಗಿದೆ. ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದ ಲಾಡ್ಜ್'​ನಲ್ಲಿನ ಸಿಸಿಟಿವಿಯ ಹಾರ್ಡ್​ ಡಿಸ್ಕ್​​ ಬದಲಾವಣೆಯಾಗಿದೆ ಎನ್ನುವ  ಅನುಮಾನವನ್ನು ನ್ಯಾ.ಕೆ.ಎನ್.ಕೇಶವ್​ ನಾರಾಯಣ್​ ಆಯೋಗ ವ್ಯಕ್ತಪಡಿಸಿದೆ. ಮತ್ತೊಂದೆಡೆ ಸಚಿವ ಕೆ.ಜೆ.ಚಾರ್ಜ್​​,  ಪ್ರಣವ್ ಮೊಹಾಂತಿ, ಎಎಂ ಪ್ರಸಾದ್ ವಿಚಾರಣೆ ನಡೆಸದೇ ತನಿಖೆಯನ್ನು ಆಯೋಗ ಮುಕ್ತಾಯಗೊಳಿಸಿದೆ. ಆಯೋಗದ ಮುಂದೆ ಅನಾವರಣಗೊಂಡ ಕೆಲ ಸ್ಟೋಟಕ ಸತ್ಯಗಳ ಮಾಹಿತಿ ಇಲ್ಲಿದೆ.

ಬೆಂಗಳೂರು (ನ.24): ಡಿವೈಎಸ್​ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಸಾಕ್ಷ್ಯನಾಶ ಪೊಲೀಸರಿಂದಲೇ ನಡೆದಿದೆ ಎಂಬ ಸ್ಫೋಟಕ ಮಾಹಿತಿ ಸುವರ್ಣ ನ್ಯೂಸ್​ಗೆ ಲಭ್ಯವಾಗಿದೆ. ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದ ಲಾಡ್ಜ್'​ನಲ್ಲಿನ ಸಿಸಿಟಿವಿಯ ಹಾರ್ಡ್​ ಡಿಸ್ಕ್​​ ಬದಲಾವಣೆಯಾಗಿದೆ ಎನ್ನುವ ಅನುಮಾನವನ್ನು ನ್ಯಾ.ಕೆ.ಎನ್.ಕೇಶವ್​ ನಾರಾಯಣ್​ ಆಯೋಗ ವ್ಯಕ್ತಪಡಿಸಿದೆ. ಮತ್ತೊಂದೆಡೆ ಸಚಿವ ಕೆ.ಜೆ.ಚಾರ್ಜ್​​, ಪ್ರಣವ್ ಮೊಹಾಂತಿ, ಎಎಂ ಪ್ರಸಾದ್ ವಿಚಾರಣೆ ನಡೆಸದೇ ತನಿಖೆಯನ್ನು ಆಯೋಗ ಮುಕ್ತಾಯಗೊಳಿಸಿದೆ. ಆಯೋಗದ ಮುಂದೆ ಅನಾವರಣಗೊಂಡ ಕೆಲ ಸ್ಟೋಟಕ ಸತ್ಯಗಳ ಮಾಹಿತಿ ಇಲ್ಲಿದೆ.

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದ ಲಾಡ್ಜ್​​ ಸಿಸಿ ಕ್ಯಾಮರ ವಿಷುವಲ್ಸ್​​ ನಾಪತ್ತೆ ಸಂಬಂಧ ಸ್ಟೋಟಕ ಮಾಹಿತಿ ಹೊರಬಿದ್ದಿದೆ. 2016ರ ಜುಲೈ 7 ರಂದು ವಿನಾಯಕ ಲಾಡ್ಜ್​ನ ವಿಷ್ಯೂವಲ್ಸ್​ ರೆಕಾರ್ಡ್​ ಆಗಿಲ್ಲ ಎಂದು ತನಿಖೆ ನಡೆಸಿದ ಪೊಲೀಸರು ಹೇಳುತ್ತಿದ್ದಾರೆ. ಜುಲೈ 6 ಹಾಗೂ 8ನೇ ತಾರೀಖಿನ ವಿಷ್ಯುವಲ್ಸ್​ ಇದೆ ಆಂದರೆ 7 ನೇ ತಾರೀಖಿನಂದು ರೆಕಾರ್ಡ್​ ಆಗಿಲ್ಲ ಅನ್ನೋದು ನಂಬಲು ಸಾಧ್ಯನಾ..? ಲಾಡ್ಜ್​ನಲ್ಲಿ ಸೀಜ್​ ಮಾಡಿದ್ದ ಡಿವಿಆರ್​ನ ಹಾರ್ಡ್​​ ಡಿಸ್ಕ್​​ ಬದಲಾವಣೆ ಮಾಡಿ​ ಹಳೆಯ ವಿಷುವಲ್ಸ್​ ಹಾಗೂ ಜುಲೈ 6 ಮತ್ತು 8 ವಿಷುವಲ್ಸ್​​​ ಹಾಕಿಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಪೊಲೀಸರು ಮಾಡಬೇಕಾದ ಅಗತ್ಯ ಪ್ರಕ್ರಿಯೆಗಳಲ್ಲಿ ಎಡವಿದ್ದಲ್ಲದೇ, ಸಾಕ್ಷ್ಯ ನಾಶ ಮಾಡಿದ್ದಾರೆ ಎಂಬ ಆರೋಪಕ್ಕೂ ಪುಷ್ಠಿ ಸಿಕ್ಕಿದೆ. ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದ ದಿನದಂದು ಲಾಡ್ಜ್​ ರೂನಲ್ಲಿ ಸಿಕ್ಕ ಎಲ್ಲಾ ವಸ್ತುಗಳನ್ನು ಪೊಲೀಸರು ಸೀಜ್​ ಮಾಡಿದ್ದಾರೆ. ಆದ್ರೆ ಗಣಪತಿ ಮೊಬೈಲ್​ ಮಾತ್ರ ಸೀಜ್​ ಮಾಡಿಲ್ಲ. ಆ ಮೊಬೈಲ್​ನ ಎಲ್ಲಾ ಡಾಟಾ ಡಿಲೀಟ್​ ಆಗಿದ್ದು, ಡಿಲೀಟ್​ ಮಾಡಿದವರು ಮಡಿಕೇರಿ ಪೊಲೀಸರಾ..? ಸಿಐಡಿ ಪೊಲೀಸರ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಜೊತೆ ಪೋಸ್ಟ್​ ಮಾರ್ಟಂ ಸಂಬಂಧ ಡಾ.ಶೈಲಜ ನೀಡಿದ್ದ ಪ್ರಾಥಮಿಕ ವರದಿಯನ್ನ ಮಾತ್ರ ಪರಿಗಣಿಸಿದ್ದು, ಎಫ್​ಎಸ್​ಎಲ್​ ವರದಿ ಬಂದ ನಂತರ ಅಂತಿಮವಾಗಿ ವೈದ್ಯರ ಅಭಿಪ್ರಾಯ ಸಂಗ್ರಹಣೆ ಮಾಡದೇ, ಸಿಐಡಿ ಬಿ ರಿಪೋರ್ಟ್​ ಸಲ್ಲಿಸಿತ್ತು.

ಗಣಪತಿ ಸಾವಿನ ಸತ್ಯ ಕಂಡುಕೊಳ್ಳಲು ರಾಜ್ಯ ಸರ್ಕಾರವೇ ನೇಮಿಸಿದ್ದ ನ್ಯಾ.ಕೆ.ಎನ್.ಕೇಶವ್​ ನಾರಾಯಣ್​ ಆಯೋಗದ ತನಿಖೆಯೂ ಮುಕ್ತಾಯವಾಗಿದೆ. ತನಿಖೆ ನಡೆಸಿದ್ದ ಅಧಿಕಾರಿಗಳು ಸೇರಿ 49 ಮಂದಿ ಹೇಳಿಕೆ, ಹಾಗೂ ಸಾಕ್ಷ್ಯಗಳ ಆಧಾರದ ಮೇಲೆ ವರದಿ ಸಿದ್ದಗೊಳ್ಳುತ್ತಿದೆ. ಅಚ್ಚರಿ ಎಂದರೆ, ಸಚಿವ ಕೆ.ಜೆ.ಜಾರ್ಜ್​​, ಐಪಿಎಸ್​ ಅಧಿಕಾರಿಗಳಾದ ಪ್ರಣವ್​​ ಮೊಹಂತಿ ಹಾಗೂ ಎ.ಎಂ.ಪ್ರಸಾದ್ ಹೇಳಿಕೆ ಪಡೆಯದೇ ವಿಚಾರಣೆ ಮುಕ್ತಾಯವಾಗಿದೆ. ಇನ್ನೊಂದೆಡೆ ಆಯೋಗವೇ ನೋಟಿಸ್​ ನೀಡದ್ರೂ, ಗಣಪತಿ ತಂದೆ ಕುಶಾಲಪ್ಪ, ಸಹೋದರ ಮಾಚಯ್ಯ ಹಾಗೂ ಸಹೋದರಿ ಸಬಿತಾ ಆಯೋಗಕ್ಕೆ ತಮ್ಮ ಹೇಳಿಕೆ ನೀಡಲು ಹಾಜರಾಗಿಲ್ಲ. ಇನ್ನು ಸಚಿವರು ಹಾಗೂ ಐಪಿಎಸ್​ ಅಧಿಕಾರಿಗೆ ಕ್ಲೀನ್​ಚಿಟ್ ನೀಡಿದ್ದ ಸಿಐಡಿ ಡಿವೈಎಸ್​ಪಿ ಶ್ರೀಧರ್​ ಕೂಡ ಆಯೋಗದ ಮುಂದೆ ಹಾಜರಾಗಿಲ್ಲ. ​ ಈಗ ಆಯೋಗ ತನ್ನ ತನಿಖೆ ಅಂತ್ಯಗೊಳಿಸಿದ್ದು, ಡಿಸೆಂಬರ್ ಕೊನೆ ವಾರದಲ್ಲಿ ವರದಿ ಸರ್ಕಾರ ಕೈಸೇರಲಿದೆ. ಒಟ್ಟಾರೆ, ತನಿಖೆ ನಡೆಸಿದ್ದ ಮಡಿಕೇರಿ ಪೊಲೀಸರು ಹಾಗೂ ಸಿಐಡಿ ಪೊಲೀಸರು ಸಾಕ್ಷ್ಯನಾಶ ಮಾಡಿದ್ದಾರೆ ಅನ್ನೋ ಸಂಬಂಧ ಹಲವು ಸಾಕ್ಷ್ಯಗಳನ್ನು ಆಯೋಗ ಕಲೆಹಾಕಿದೆ ಎಂದು ತಿಳಿದುಬಂದಿದೆ.