ಬಾಲಕನ ದೇಹದಲ್ಲಿ ಸದ್ದಿಲ್ಲದೇ ಬೆಳೆಯುತ್ತಿತ್ತು ಶಂಕದಹುಳು..!

First Published 13, Feb 2018, 9:03 AM IST
Doctors Remove a Snail Growing inside a boys abscess
Highlights

ಮಾನವರ ದೇಹದಲ್ಲಿ ರೋಗಾಣುಗಳ ರೂಪದಲ್ಲಿ ಸೂಕ್ಷ್ಮಜೀವಿಗಳು ಸೇರಿಕೊಳ್ಳುವುದು ಹೊಸದಲ್ಲ. ಆದರೆ ವೈದ್ಯಕೀಯ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾದ ಪ್ರಕರಣವೊಂದರಲ್ಲಿ, ಬಾಲಕನ ದೇಹದಲ್ಲಿ ಜೀವಂತವಾಗಿದ್ದ ಮತ್ತು ದಿನೇ ದಿನೇ ಬೆಳೆಯುತ್ತಿದ್ದ ಶಂಕದ ಹುಳುವೊಂದು ಪತ್ತೆಯಾಗಿದೆ.

ನವದೆಹಲಿ: ಮಾನವರ ದೇಹದಲ್ಲಿ ರೋಗಾಣುಗಳ ರೂಪದಲ್ಲಿ ಸೂಕ್ಷ್ಮಜೀವಿಗಳು ಸೇರಿಕೊಳ್ಳುವುದು ಹೊಸದಲ್ಲ. ಆದರೆ ವೈದ್ಯಕೀಯ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾದ ಪ್ರಕರಣವೊಂದರಲ್ಲಿ, ಬಾಲಕನ ದೇಹದಲ್ಲಿ ಜೀವಂತವಾಗಿದ್ದ ಮತ್ತು ದಿನೇ ದಿನೇ ಬೆಳೆಯುತ್ತಿದ್ದ ಶಂಕದ ಹುಳುವೊಂದು ಪತ್ತೆಯಾಗಿದೆ.

ಇತ್ತೀಚೆಗೆ ಕ್ಯಾಲಿಫೋರ್ನಿಯಾ ಸಮೀಪದ 11 ವರ್ಷದ ಬಾಲಕನೊಬ್ಬ ಕೈನೋವೆಂದು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಹೋಗಿದ್ದ. ಆದರೆ ದಿನಕಳೆದಂತೆ ಆತನ ಕೈನ ಕಂಕುಳ ಭಾಗದಲ್ಲಿದ್ದ ಸಣ್ಣ ಗಾಯ ಕೀವು ತುಂಬಿಕೊಂಡು ದೊಡ್ಡದಾಗುತ್ತಾ ಬರುತ್ತಿತ್ತು. ಹೀಗಾಗಿ ಆತ ಮತ್ತೆ ಆಸ್ಪತ್ರೆಗೆ ತಪಾಸಣೆಗೆ ಬಂದಿದ್ದ. ಈ ವೇಳೆ ಕೀವು ತುಂಬಿರಬೇಕು ಎಂದು ವೈದ್ಯರು ಸಿರಿಂಜ್‌ ಮೂಲಕ ಗಾಯವನ್ನು ಒಡೆದು, ಕೀವು ಹೊರತೆಗೆಯುವಾಗ 4 ಮಿ.ಮೀ ಸುತ್ತಳತೆಯ ಸಣ್ಣ ಹುಳವೊಂದು ಕಂಡುಬಂದಿದೆ. ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದು ಸಮುದ್ರದಲ್ಲಿ ಇರುವ ಶಂಕು ಹುಳವೆಂದು ಖಚಿತಪಟ್ಟಿದೆ.

ಕ್ಯಾಲಿಫೋರ್ನಿಯಾ ಬೀಚ್‌ ಒಂದರ ಪೂಲ್‌ ಒಂದರಲ್ಲಿ ಆಟವಾಡುತ್ತಿದ್ದ ಹುಡುಗ ಕಲ್ಲಿನ ಮೇಲೆ ಬಿದ್ದು, ಆತನ ಮೊಣಕೈಗೆ ತರಚಿದ ಗಾಯವಾಗಿತ್ತು. ಈ ಸಂದರ್ಭ ಬಾಲಕನ ಕೈ ಚರ್ಮದೊಳಗೆ ಹುಳುವಿನ ಮೊಟ್ಟೆನುಗ್ಗಿ, ಬಳಿಕ ಬಾಲಕನ ದೇಹದೊಳಗೇ ಬೆಳೆದಿದೆ. ಶಂಕದಹುಳುವಿಗೆ ತನ್ನ ಕವಚದೊಳಗಿನ ತೇವಾಂಶದಿಂದ ಬದುಕುಳಿಯಲು ಸಾಧ್ಯವಿದ್ದುದರಿಂದ, ಅದು ಬಾಲಕನ ಚರ್ಮದೊಳಗೆ ಬದುಕುಳಿದಿರುವ ಸಾಧ್ಯತೆಯಿದೆ ಎಂದು ವೈದ್ಯರು ಅಂದಾಜಿಸಿದ್ದಾರೆ.

loader