ಯಾದಗಿರಿ[ಅ.06]: ‘ಇಡಿ ರಾಜ್ಯಕ್ಕೆ ನಾನು ಯಾರು ಎಂದು ಗೊತ್ತು. ನಿಮಗೆ ಗೊತ್ತಿಲ್ವಾ? ನಾನು ಯಾರು? ನಾನು ಯಾರು?’

ಇದು ಸಚಿವ ಪ್ರಭು ಚವ್ಹಾಣ್‌ ನಗರದ ಜೆಸ್ಕಾಂ ಕಚೇರಿಗೆ ತೆರಳಿದ್ದ ವೇಳೆ ತನ್ನನ್ನು ಗುರುತು ಹಿಡಿಯದ ಅಧಿಕಾರಿಗೆ ಕೇಳಿದ ಪ್ರಶ್ನೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ಇವರು ಶನಿವಾರ ನಗರದಲ್ಲಿ ತಹಸೀಲ್ದಾರ್‌ ಕಚೇರಿ, ಬಿಇಒ ಕಚೇರಿ, ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಿಗೆ ಮಿಂಚಿನ ದಾಳಿ ನಡೆಸಿದರು.

ಜೆಸ್ಕಾಂ ಕಚೇರಿಗೆ ತೆರಳಿದ್ದಾಗ, ಅಲ್ಲಿನ ಅಧಿಕಾರಿಯೊಬ್ಬರು ನೀವು ಯಾರು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಸಚಿವ ಪ್ರಭು ಮತ್ತೇ ಪ್ರಶ್ನೆ ಮಾಡಿದರು. ಆ ವೇಳೆ ಅಧಿಕಾರಿಯಿಂದ ಗೊತ್ತಿಲ್ಲ ಎಂಬ ಉತ್ತರ ಬಂತು. ಇದರಿಂದ ಕೆಂಡಾಮಂಡಲರಾದ ಸಚಿವರು ಅಧಿಕಾರಿಯನ್ನು ಈ ಮೇಲಿನಂತೆ ತರಾಟೆಗೆ ತೆಗೆದುಕೊಂಡರು.