Asianet Suvarna News Asianet Suvarna News

ಆತಂಕ ಬೇಡ, ಸರ್ಕಾರಕ್ಕೆ ಏನೂ ಆಗಲ್ಲ: ಸಿದ್ದರಾಮಯ್ಯ

ಆತಂಕ ಬೇಡ, ಸರ್ಕಾರಕ್ಕೆ ಏನೂ ಆಗಲ್ಲ: ಸಿದ್ದು| ಹೋಟೆಲ್‌ನಲ್ಲಿ ಕಾಂಗ್ರೆಸ್‌ ಶಾಸಕರ ಜೊತೆ ಸಭೆ| ಆತ್ಮವಿಶ್ವಾಸ ತುಂಬಲು ಯತ್ನ

Do Not Worry Govt Will Not Fall says Former CM Siddaramaiah Over Karnataka Political Crisis
Author
Bangalore, First Published Jul 15, 2019, 9:19 AM IST
  • Facebook
  • Twitter
  • Whatsapp

ಬೆಂಗಳೂರು[ಜು.15]: ರಾಜೀನಾಮೆ ನೀಡಿರುವ ಅತೃಪ್ತ ಶಾಸಕರ ಮನವೊಲಿಕೆ ಪ್ರಯತ್ನ ವಿಫಲವಾಗುತ್ತಲಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಪಕ್ಷದ ಎಲ್ಲ ಇತರೆ ಶಾಸಕರೊಂದಿಗೆ ಸಭೆ ನಡೆಸಿದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ, ಆತಂಕ ಪಡಬೇಡಿ ಸರ್ಕಾರ ಉಳಿಸಿಕೊಳ್ಳುವ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ ಎಂದು ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಭಾನುವಾರ ನಗರದ ತಾಜ್‌ ವಿವಾಂತ ಹೋಟೆಲ್‌ನಲ್ಲಿ ಪಕ್ಷದ ಎಲ್ಲ ಇತರೆ ಶಾಸಕರನ್ನು ಕರೆದು ಮಾತನಾಡಿರುವ ಸಿದ್ದರಾಮಯ್ಯ, ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿ ಯಾರಿಗಾದರೂ ಏನೇ ಆತಂಕ, ಅನುಮಾನಗಳಿದ್ದರೂ ಹೇಳಿ. ಸರ್ಕಾರಕ್ಕೆ ಏನೂ ಆಗುವುದಿಲ್ಲ. ಮುಖ್ಯಮಂತ್ರಿ ಅವರು ವಿಶ್ವಾಸಮತ ಯಾಚನೆ ವೇಳೆ ಎಲ್ಲರೂ ಸದನಕ್ಕೆ ಹಾಜರಾಗಿ ಪಕ್ಷದ ಪರ ಮತ ಚಲಾಯಿಸಿ. ಶಾಸಕರು ಕೈತಪ್ಪಿ ಹೋಗುತ್ತಿರುವ ಬಗ್ಗೆ ಆತಂಕಪಡಬೇಡಿ. ಅವರನ್ನು ಮನವೊಲಿಸಿ ಕರೆತರುವ ಕೆಲಸ ಮಾಡಲಾಗುತ್ತಿದೆ. ನಾವು ಸರ್ಕಾರ ಉಳಿಸಿಕೊಳ್ಳಲು ಏನು ಮಾಡಬೇಕೋ ಮಾಡುತ್ತಿದ್ದೇವೆ ಎಂದು ಶಾಸಕರಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ನಡೆಸಿದರು ಎಂದು ತಿಳಿದು ಬಂದಿದೆ.

Follow Us:
Download App:
  • android
  • ios