'ಗೌಡರು ಬಾಲ್ ಎಸೆಯುತ್ತಾ ಇರ್ತಾರೆ, ಚಿಂತೆ ಬೇಡ'
ದೇವೇಗೌಡರ ಮಧ್ಯಂತರ ಚುನಾವಣೆ ಹೇಳಿಕೆ| ಗೌಡರು ಬಾಲ್ ಎಸೆಯುತ್ತಾ ಇರ್ತಾರೆ, ಚಿಂತೆ ಬೇಡ: ಸತೀಶ್
ಬಳ್ಳಾರಿ[ಜೂ.22]: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮಧ್ಯಂತರ ಚುನಾವಣೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸತೀಶ ಜಾರಕಿಹೊಳಿ, ಸರ್ಕಾರ ಸುಭದ್ರವಾಗಿದ್ದು ಯಾವ ಮಧ್ಯಂತರ ಚುನಾವಣೆಯೂ ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಎಲೆಕ್ಷನ್ ಬಾಂಬ್ ಹಾಕಿ ದೇವೇಗೌಡರು ಉಲ್ಟಾ ಹೊಡೆಯಲು ಕಾರಣವೇನು?
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಹಾಗೇ ಹೇಳುತ್ತಾ ಇರುತ್ತಾರೆ. ಅದರ ಬಗ್ಗೆ ಹೆಚ್ಚು ಚಿಂತೆ ಮಾಡೋ ಅವಶ್ಯಕತೆಯಿಲ್ಲ. ಅವರು ಹೀಂಗೆ ಬಾಲ್ ಎಸೆಯುತ್ತಲೇ ಇರುತ್ತಾರೆ. ಆದರೆ ದೇವೇಗೌಡರ ಆಶೀರ್ವಾದ ನಮ್ಮ ಮೇಲಿದೆ. ಹೀಗಾಗಿ ಸರ್ಕಾರಕ್ಕೆ ಏನೂ ಆಗುವುದಿಲ್ಲ. ಯಾವ ಮಧ್ಯಂತರ ಚುನಾವಣೆಯೂ ಬರುವುದಿಲ್ಲ ಎಂದರು.