ಎಸ್‌ಎಂಎಸ್ ಮೂಲಕ ಆಧಾರ್ ನಂಬರ್ ಕಳುಹಿಸದಂತೆ ಎಲ್‌ಐಸಿ ತನ್ನ ಗ್ರಾಹಕರಿಗೆ ಸೂಚಿಸಿದೆ. ಎಸ್‌ಎಂಎಸ್ ಮೂಲಕ ಆಧಾರ್ ಲಿಂಕ್ ಮಾಡುವ ಯಾವುದೇ ಸೌಲಭ್ಯವನ್ನು ಇನ್ನೂ ಜಾರಿಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ನವದೆಹಲಿ: ಎಸ್ಎಂಎಸ್ ಮೂಲಕ ಆಧಾರ್ ನಂಬರ್ ಕಳುಹಿಸದಂತೆ ಎಲ್ಐಸಿ ತನ್ನ ಗ್ರಾಹಕರಿಗೆ ಸೂಚಿಸಿದೆ. ಎಸ್ಎಂಎಸ್ ಮೂಲಕ ಆಧಾರ್ ಲಿಂಕ್ ಮಾಡುವ ಯಾವುದೇ ಸೌಲಭ್ಯವನ್ನು ಇನ್ನೂ ಜಾರಿಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಎಸ್ಎಂಎಸ್ ಮೂಲಕ ಆಧಾರ್ ನಂಬರ್ ಕಳುಹಿಸುವಂತೆ ಎಲ್ಐಸಿಯ ಲೋಗೋ ಇರುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಎಲ್ಐಸಿ ಈ ರೀತಿಯ ಯಾವುದೇ ಸಂದೇಶಗಳನ್ನು ಕಳುಹಿಸಿಲ್ಲ. ಎಸ್ಸೆಮ್ಮೆಸ್ ಮೂಲಕ ಸೌಲಭ್ಯ ಆರಂಭಿಸಿದರೆ ಅದನ್ನು ತನ್ನ ವೆಬ್ಸೈಟ್’ಅನ್ನು ಅಪ್ಡೇಟ್ ಗ್ರಾಹಕರಿಗೆ ಮಾಹಿತಿ ನೀಡಲಾಗುವುದು ಎಂದು ಎಲ್ಐಸಿ ತಿಳಿಸಿದೆ.
