ರಾಮಚಂದ್ರಾಪುರ ಮಠದಲ್ಲಿ ಹೆಣ್ಣು ಮಕ್ಕಳಿಗೆ ನೀಡುವ ‘ಕನ್ಯಾಸಂಸ್ಕಾರ’ ಕುರಿತು ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ರಾಘವೇಶ್ವರ ಭಾರತೀ ಸ್ವಾಮೀಜಿಯವರ ತೇಜೋವಧೆ ಮಾಡಬಾರದು ಹಾಗೂ ಜನರ ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸುವ ಪ್ರಯತ್ನ ಮಾಡಬಾರದು ಎಂದು ರೇವತಿ ರಾಜ್ ಹಾಗೂ ಆರ್.ಎಂ.ಎನ್.ರಮೇಶ್ ಎಂಬುವರಿಗೆ ನ್ಯಾಯಾಲಯ ನಿರ್ದೇಶಿಸಿದೆ.

ಬೆಂಗಳೂರು: ರಾಮಚಂದ್ರಾಪುರ ಮಠದಲ್ಲಿ ಹೆಣ್ಣು ಮಕ್ಕಳಿಗೆ ನೀಡುವ ‘ಕನ್ಯಾಸಂಸ್ಕಾರ’ ಕುರಿತು ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ರಾಘವೇಶ್ವರ ಭಾರತೀ ಸ್ವಾಮೀಜಿಯವರ ತೇಜೋವಧೆ ಮಾಡಬಾರದು ಹಾಗೂ ಜನರ ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸುವ ಪ್ರಯತ್ನ ಮಾಡಬಾರದು ಎಂದು ರೇವತಿ ರಾಜ್ ಹಾಗೂ ಆರ್.ಎಂ.ಎನ್.ರಮೇಶ್ ಎಂಬುವರಿಗೆ ನ್ಯಾಯಾಲಯ ನಿರ್ದೇಶಿಸಿದೆ.

ಕನ್ಯಾಸಂಸ್ಕಾರದ ಕುರಿತು ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ರಾಘವೇಶ್ವರ ಸ್ವಾಮೀಜಿ ಅವರ ತೇಜೋವಧಗೆ ರೇವತಿ ರಾಜ್ ಮತ್ತು ಆರ್.ಎಂ.ಎನ್. ರಮೇಶ್ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಎನ್. ಆರ್.ಮುಕ್ರಿ, ಮಂಜುಳಾ ಮುಕ್ರಿ ಸೇರಿದಂತೆ ಇತರೆ ಮೂವರು ಬೆಂಗಳೂರಿನ ಹೆಚ್ಚುವರಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಖುದ್ದಾಗಿ ಅಥವಾ ಪ್ರತಿನಿಧಿಗಳ ಮೂಲಕ ಕನ್ಯಾಸಂಸ್ಕಾರದಂತಹ ಧಾರ್ಮಿಕ ಪ್ರಕ್ರಿಯೆ ಕುರಿತು ರಾಮಚಂದ್ರಾಪುರ ಮಠ ಅಥವಾ ರಾಘವೇಶ್ವರ ಭಾರತಿ ಸ್ವಾಮಿ ವಿರುದ್ಧ ಮುದ್ರಣ, ವಿದ್ಯುನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕ ಸಮಾವೇಶದಲ್ಲಿ ತೇಜೋವಧೆ ಮಾಡುವಂತಹ ಹೇಳಿಕೆ ಹಾಗೂ ಸಂದೇಶ ನೀಡಬಾರದು ಎಂದು ರೇವತಿರಾಜ್, ಆರ್.ಎಂ.ಆರ್.ರಮೇಶ್‌ಗೆ ನಿರ್ದೇಶಿಸಿದೆ.