Asianet Suvarna News Asianet Suvarna News

ಕ್ಷೇತ್ರ ಬಿಡಬೇಡಿ, ಕರೆದಾಗ ತಕ್ಷಣ ಬೆಂಗ್ಳೂರ್ ಗೆ ಬನ್ನಿ:BSY

ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಚರ್ಚೆ ಮೇಲ್ನೋಟಕ್ಕೆ ಪರಿಸ್ಥಿತಿ ತಿಳಿಯಾಗಿದೆ. ಆದರೆ, ಒಳ ಒಳಗೆ ಸದ್ದಿಯಲ್ಲದೇ ಅತೃಪ್ತ ಶಾಸಕರು ಒಂದೆಡೆ ಸೇರುತ್ತಿರುತ್ತಿರುವುದು ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಚರ್ಚೆ ಕಾವೇರ ತೊಡಗಿದೆ. ಇದರಿಂದ ಬಿಜೆಪಿಯ ಎಲ್ಲಾ ಶಾಸಕರಿಗೆ ಗೂ  ಬಿ.ಎಸ್. ಯಡಿಯೂರಪ್ಪ ಒಂದು ಖಡಕ್ ಸೂಚನೆ ರವಾನಿಸಿದ್ದಾರೆ.

Do Not Go Out of State Says Yeddyurappa To Party MLAs
Author
Bengaluru, First Published Sep 22, 2018, 6:53 PM IST

ಬೆಂಗಳೂರು, [ಸೆ.22]: ಪ್ರಸ್ತುತ ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆದಿದ್ದು, ಗೊಂದಲದ ಗೂಡಾಗಿದೆ. ಕಳೆದ ಹದಿನೈದು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. 

ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಚರ್ಚೆ ಮೇಲ್ನೋಟಕ್ಕೆ ಪರಿಸ್ಥಿತಿ ತಿಳಿಯಾಗಿದೆ. ಆದರೆ, ಒಳ ಒಳಗೆ ಸದ್ದಿಯಲ್ಲದೇ ಅತೃಪ್ತ ಶಾಸಕರು ಒಂದೆಡೆ ಸೇರುತ್ತಿರುತ್ತಿರುವುದು ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಚರ್ಚೆ ಕಾವೇರ ತೊಡಗಿದೆ.

ಹೀಗಾಗಿ ಇದರ ಲಾಭ ಪಡೆದುಕೊಳ್ಳಲು ಬಿಜೆಪಿ ತುದಿಗಾಲಲ್ಲಿ ನಿಂತಿದ್ದು, ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು. ಇದರಿಂದ ಬಿಜೆಪಿಯ ಎಲ್ಲಾ ಶಾಸಕರಿಗೆ ಗೂ  ಬಿ.ಎಸ್. ಯಡಿಯೂರಪ್ಪ ಒಂದು ಖಡಕ್ ಸೂಚನೆ ರವಾನಿಸಿದ್ದಾರೆ.

ಕ್ಷೇತ್ರ ಬಿಟ್ಟು ಎಲ್ಲೂ ಹೋಗದಂತೆ ಬಿಜೆಪಿ ಶಾಸಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ಸೂಚನೆ ನೀಡಿದ್ದು, ಯಾವುದೇ ಸಂದರ್ಭದಲ್ಲಿ ನಿಮಗೆ ದೂರವಾಣಿ ಕರೆ ಬರಬಹುದು. ತಕ್ಷಣ ಬೆಂಗಳೂರಿಗೆ ಬರಬೇಕಾಗುತ್ತದೆ. ಹೀಗಾಗಿ ಹೊರ ರಾಜ್ಯ ಅಥವಾ ದೇಶಗಳಿಗೆ ಹೋಗದಂತೆ ಶಾಸಕರಿಗೆ ಬಿಎಸ್ವೈ ಸೂಚಿಸಿದ್ದಾರೆ.

ಸೋಮವಾರದ ನಂತರ ಪ್ರತಿ ಕ್ಷಣವೂ ಬಹಳ ಮುಖ್ಯ.  ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನೀವೆಲ್ಲ ಬದ್ಧರಾಗುತ್ತೀರೆಂಬ ನಂಬಿಕೆ ಇದೆ. ಮಹತ್ವದ ಬೆಳವಣಿಗೆ ಆಗುವ ಸಾಧ್ಯತೆ ಇದೆ. ಹೀಗಾಗಿ ನಿಮ್ಮ ಸಹಕಾರ ಅತಿಮುಖ್ಯ ಎಂದು ಬಿಎಸ್ ವೈ ಸಲಹೆ ನೀಡಿದ್ದಾರೆ.

Follow Us:
Download App:
  • android
  • ios