ಚೆನ್ನೈ (ಸೆ. 16): ಕಾವೇರಿ ವಿವಾದಕ್ಕೆ ಸಂಬಂದಿಸಿದಂತೆ ತಮಿಳುನಾಡಿನಲ್ಲಿ ನಡೆಯುತ್ತಿರುವ ಬಂದ್’ಗೆ ಬೆಂಬಲ ನೀಡಿದ್ದಕ್ಕಾಗಿ ಪ್ರತಿಪಕ್ಷ ನಾಯಕರಾದ ಎಂ.ಕೆ ಸ್ಟಾಲಿನ್ ಮತ್ತು ವೈಕೋರವನ್ನು ಬಂಧಿಸಲಾಗಿದೆ.

Add Asianetnews Kannada as a Preferred SourcegooglePreferred

ರೈಲು ತಡೆಗೆ ಪ್ರಯತ್ನಿಸಲು ಮುಂದಾದಾಗ ಸ್ಟಾಲಿನ್ ರನ್ನು ಬಂಧಿಸಲಾಗಿದೆ.

ಚೆನ್ನೈನಲ್ಲಿ ಬಹುತೇಕ ಎಲ್ಲಾ ಅಂಗಡಿಗಳು, ರೆಸ್ಟೋರೆಂಟ್’ಗಳನ್ನು ಮುಚ್ಚಲಾಗಿತ್ತು. ಬೆರಳೆಣಿಕೆಯಷ್ಟು ಬಸ್’ಗಳು, ಆಟೋ ರಿಕ್ಷಾಗಳು ರಸ್ತೆಗಿಳಿದಿದ್ದವು.

ಸರ್ಕಾರಿ ಬಸ್ ಗಳು, ರೈಲು ಸಂಚಾರ, ಮತ್ತು ವಿಮಾನ ಹಾರಾಟದ ಮೇಲೆ ಬಂದ್ ಬಿಸಿ ತಟ್ಟಿಲ್ಲ. ಶಾಲಾ-ಕಾಲೇಜುಗಳು, ಮತ್ತು ಸರ್ಕಾರಿ ಕಚೇರಿಗಳು ತೆರೆದಿದ್ದವು.