ತಮಿಳುನಾಡನ್ನು ಹಲವು ದಶಕಗಳ ಕಾಲ ಆಳಿದ್ದ ಕರುಣಾನಿಧಿ ಕೊನೆಯುಸಿರೆಳೆದ ನಂತರ ಅಂತ್ಯ ಸಂಸ್ಕಾರಕ್ಕೆ ಸ್ಥಳ ಆಯ್ಕೆ ಮಾಡುವ ಸಂಬಂಧ ಸಾಕಷ್ಟು ವಿವಾದಗಳು ಭುಗಿಲೆದ್ದಿದ್ದವು. ಮದ್ರಾಸ್ ಹೈ ಕೋರ್ಟ್ ಈ ಸಂಬಂಧ ವಿಚಾರಣೆ ನಡೆಸಿ, ಇದೀಗ ತೀರ್ಪು ನೀಡಿದ್ದು ಮರೀನಾ ಬೀಚ್‌ನಲ್ಲಿ ಕಲೈನರ್ ಅಂತ್ಯ ಸಂಸ್ಕಾರಕ್ಕೆ ಅನುವು ಮಾಡಿ ಕೊಟ್ಟಿದೆ.

ಚೆನ್ನೈ: ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಅಂತ್ಯ ಸಂಸ್ಕಾರಕ್ಕೆ ಜಾಗ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಮದ್ರಾಸ್ ಹೈ ಕೋರ್ಟ್, ಮರೀನಾ ಬೀಚ್‌ನಲ್ಲಿಯೇ ನಾಯಕನ ಅಂತ್ಯ ಸಂಸ್ಕಾರ ನೆರವೇರಿಸಲು ಅನುಮತಿ ನೀಡಿದೆ. ಕೋರ್ಟಿನ ಈ ತೀರ್ಪಿನಿಂದ ಸೂತಕದಲ್ಲಿಯೂ ಸಂಭ್ರಮ ಮನೆ ಮಾಡಿದ್ದು, ಬೀಚ್ ಸಮೀಪ ಅಭಿಮಾನಿಗಳು ಜಮಾಯಿಸಿದ್ದಾರೆ. ಅಲ್ಲದೇ ಮಕ್ಕಳಿಗೂ ದುಃಖದ ಕಟ್ಟೆಯೊಡೆದಿದೆ.

Scroll to load tweet…

ತಮಿಳುನಾಡು ಮುಖ್ಯಮಂತ್ರಿಯಾಗಿದ್ದಾಗಲೇ ಕೊನೆಯುಸಿರೆಳೆದ ಜಯಲಲಿತಾ ಹಾಗೂ ಇತರೆ ದ್ರಾವಿಡ ನಾಯಕರ ಸಮಾಧಿ ಸಮೀಪದಲ್ಲಿ ಕರುಣಾನಿಧಿ ಅಂತ್ಯ ಸಂಸ್ಕಾರ ನೆರವೇರಿಸುವ ಸಂಬಂಧ ಮದ್ರಾಸ್ ಹೈ ಕೋರ್ಟ್‌ನಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ, ಅರ್ಜಿದಾರರು ಮರೀನಾ ಬೀಚ್‌ನಲ್ಲಿ ಅಂತ್ಯಸಂಸ್ಕಾರ ನಡೆಸಲು ತಮ್ಮ ಯಾವುದೇ ವಿರೋಧ ವಿಲ್ಲ ಎಂದು ಹೇಳಿದ್ದರಿಂದ, ಕೋರ್ಟ್ ಅರ್ಜಿ ವಾಪಸ್ ಪಡೆಯಲು ಸೂಚಿಸಿತ್ತು. 

ಇದೀಗ ಮದ್ರಾಸ್ ಹೈ ಕೋರ್ಟ್‌ನ ದ್ವಿ ಸದಸ್ಯ ಪೀಠ, ಮರೀನಾ ಬೀಚ್‌ನಲ್ಲಿ ಕರುಣಾ ಅಂತ್ಯ ಸಂಸ್ಕಾರ ನೆರವೇರಿಸಲು ಅನುವು ಮಾಡಿ ಕೊಟ್ಟಿದೆ.

ಕರುಣಾನಿದಿಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ದ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷದ ಪರಮೋಚ್ಛ ನೇತಾರ ಮುತ್ತುವೇಲ್ ಕರುಣಾನಿಧಿ ಮಂಗಳವಾರ ಸಾಯಂಕಾಲ ಚೆನ್ನೈನಲ್ಲಿರುವ ಕಾವೇರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. 

Scroll to load tweet…