ಸಿದ್ದರಾಮಯ್ಯ ನಂಬಿಸಿ ಕುತ್ತಿಗೆ ಕುಯ್ಯುವ ಕೆಲಸ ಮಾಡುತ್ತಿದ್ದಾರೆ. ನನ್ನ ಮಕ್ಕಳ ಇಂದಿನ ಸ್ಥಿತಿಗೆ ಸಿದ್ದರಾಮಯ್ಯ ಅವರೇ ಕಾರಣ'

ಬೆಂಗಳೂರು(ಆ.03): ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಾಯಿ ಗೌರಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಕ್ಷರಶಃ ಗುಡುಗಿದ್ದಾರೆ.

ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು ತಮ್ಮ ಇಬ್ಬರು ಮಕ್ಕಳ ಬೆಂಬಲಕ್ಕೆ ಸಿಎಂ ಸಿದ್ದರಾಮಯ್ಯ ನಿಂತಿಲ್ಲ. ನನ್ನ ಮಗನ ಮನೆ ಮೇಲೆ ದಾಳಿಯಾದಾಗ ಸಿದ್ದರಾಮಯ್ಯ ಯಾಕೆ ಪ್ರಶ್ನೆ ಮಾಡಲಿಲ್ಲ. ದಾಳಿ ಆದ್ಮೇಲೆ ಬಂದು ಮಾತಾಡಿ ನಾಟಕವಾಡಿದ್ರೆ ನಮಗೆ ಗೊತ್ತಾಗಲ್ವಾ..? ಸಿದ್ದರಾಮಯ್ಯನವರೇ ನಮ್ಮ ಮಕ್ಕಳ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ

ನನ್ನ ಮಕ್ಕಳಿಂದಲೇ ಇವತ್ತು ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ನಂಬಿಸಿ ಕುತ್ತಿಗೆ ಕುಯ್ಯುವ ಕೆಲಸ ಮಾಡುತ್ತಿದ್ದಾರೆ. ನನ್ನ ಮಕ್ಕಳ ಇಂದಿನ ಸ್ಥಿತಿಗೆ ಸಿದ್ದರಾಮಯ್ಯ ಅವರೇ ಕಾರಣ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನ್ನ ಮಕ್ಕಳು ತಪ್ಪು ಮಾಡಿಲ್ಲ, ಜನರಿಗಾಗಿ ಮನೆಯವರನ್ನೆಲ್ಲ ಬಿಟ್ಟು ದುಡಿಯುತ್ತಿದ್ದಾರೆ. ನನ್ನ ಮಗ ಮುಖ್ಯಮಂತ್ರಿಯಾಗ್ತಾನೆ ಅಂತ ಹೀಗೆಲ್ಲಾ ಮಾಡಲಾಗುತ್ತಿದೆ. ನನ್ನ ಮಕ್ಕಳನ್ನು ಕಂಡರೆ ಪಕ್ಷದಲ್ಲಿರುವ ಕೆಲ ಮಂತ್ರಿಗಳು ಅಸೂಯೆ ಪಡುತ್ತಾರೆ. ಸಿದ್ದರಾಮಯ್ಯ ಅವರು ಘೋಷಿಸಿರುವ ಭಾಗ್ಯಗಳಲ್ಲ ಅವರ ಮನೆಯಿಂದ ತಂದದ್ದಲ್ಲ ರೈತರದು' ಎಂದು ಸಿಎಂ ವಿರುದ್ಧ ಕಿಡಿ ಕಾರಿದರು.