ಜುಲೈ22 ರಂದು ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ಹ್ಯಾಂಡ್ ಪೋಸ್ಟ್ ನಲ್ಲಿ ರಮೇಶ್ ಎಂಬುವವರಿಗೆ ತೇಜ್ ಕುಮಾರ್ ಹಲ್ಲೆ ನಡೆಸಿರೋ ಆರೋಪ ಕೇಳಿ ಬಂದಿದೆ

ಕೊಡಗು(ಆ.11): ಮರಳು ಸಾಗಾಟ ವಿಚಾರದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅಭಿಮಾನಿಯೊಬ್ಬ ದಬ್ಬಾಳಿಕೆ ನಡೆಸಿರೋ ವೀಡಿಯೋ ಕೊಡಗು ಜಿಲ್ಲೆಯಲ್ಲಿ ವೈರಲ್ ಆಗಿದೆ.

ಡಿ.ಕೆ.ಶಿ ಅಭಿಮಾನಿಗಳ ಸಂಘದ ಸೋಮವಾರಪೇಟೆ ತಾಲ್ಲೂಕು ಅದ್ಯಕ್ಷ ತೇಜ್ ಕುಮಾರ್ ಹಾಗೂ ಅವನ ಸಹೋದರ ವೇದ್ ಕುಮಾರ್ ಮರಳು ವ್ಯವಹಾರಕ್ಕೆ ಸಂಬಂಧಿಸಿದಂತೆ ರಮೇಶ್ ಎಂಬ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿರೋ ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ. 

ಜುಲೈ22 ರಂದು ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ಹ್ಯಾಂಡ್ ಪೋಸ್ಟ್ ನಲ್ಲಿ ರಮೇಶ್ ಎಂಬುವವರಿಗೆ ತೇಜ್ ಕುಮಾರ್ ಹಲ್ಲೆ ನಡೆಸಿರೋ ಆರೋಪ ಕೇಳಿ ಬಂದಿದೆ, ತನ್ನ ಸಹೋದರನೊಂದಿಗೆ ಸೇರಿ ತೇಜ್ ಕುಮಾರ್ ರಮೇಶ್'ಗೆ ಅವ್ಯಾಚ್ಛ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡುತ್ತಿರೊ ವೀಡಿಯೋ ಕೊಡಗಿನಾದ್ಯಂತ ವೈರಲ್ ಆಗಿದೆ. ಶನಿವಾರಸಂತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಕೊಲೆ ಯತ್ನ ಕೇಸ್ ದಾಖಲು ಮಾಡಿಕೊಂಡಿರೋ ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.