ಸಿಎಂ ಪಕ್ಷದ ಹಿರಿಯ ನಾಯಕರಾದ ಪರಮೇಶ್ವರ್, ಖರ್ಗೆ, ಆಸ್ಕರ್ ಎಲ್ಲರೂ ಒಪ್ಪಿದರೆ ಅಧ್ಯಕ್ಷ ಸ್ಥಾನ ಒಪ್ಪುವೆ’. ‘ಪಕ್ಷ ಈ ಹಿಂದೆ ಕೊಟ್ಟ ಎಲ್ಲ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸಿದ್ದೇನೆ’.

ನವದೆಹಲಿ(ಮೇ.03): ಕಾಂಗ್ರೆಸ್ ಹಿರಿಯ ನಾಯಕರಿಗೆ ಟಾಂಗ್ ಕೊಟ್ಟಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ 'ನಿರುದ್ಯೋಗಿಗಳು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿ ಪಡೆಯುವುದು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

ಅಮೆರಿಕಾ ಪ್ರವಾಸದಿಂದ ನೇರವಾಗಿ ದೆಹಲಿಗೆ ಬಂದಿಳಿದು ಸುದ್ದಿಗಾರರರೊಂದಿಗೆ ಮಾತನಾಡಿದ ಸಚಿವರು, ‘ಸಿಎಂ ಪಕ್ಷದ ಹಿರಿಯ ನಾಯಕರಾದ ಪರಮೇಶ್ವರ್, ಖರ್ಗೆ, ಆಸ್ಕರ್ ಎಲ್ಲರೂ ಒಪ್ಪಿದರೆ ಅಧ್ಯಕ್ಷ ಸ್ಥಾನ ಒಪ್ಪುವೆ’. ‘ಪಕ್ಷ ಈ ಹಿಂದೆ ಕೊಟ್ಟ ಎಲ್ಲ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸಿದ್ದೇನೆ’. ‘ಈಗಲೂ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಕೊಟ್ಟರೆ ಸಮರ್ಥವಾಗಿ ನಿರ್ವಹಿಸುವೆ’ಎಂದು ತಾವು ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಪರೋಕ್ಷವಾಗಿ ತಿಳಿಸಿದರು.

‘ಸಿಎಂ ಸಿದ್ದರಾಮಯ್ಯ ಮತ್ತು ನನ್ನ ನಡುವೆ ಯಾವುದೇ ಅಸಮಾಧಾನ ಇದೆ ಅನ್ನೋದು ಗಾಳಿ ಸುದ್ದಿ’. ನಾವಿಬ್ಬರು ಆತ್ಮೀಯವಾಗಿದ್ದೇವೆ'ಎಂದರು. ದೆಹಲಿಯಲ್ಲಿ ಬೀಡುಬಿಟ್ಟಿರುವ ಸಚಿವರು ರಾಜ್ಯದ ನೂತನ ಉಸ್ತುವಾರಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಲಿದ್ದಾರೆ.