ಡಿಕೆಶಿ ಮನೆ ಮೇಲೆ ನಡೆದ ದಾಳಿಗೂ ಗುಜರಾತ್ ಶಾಸಕರು ರೆಸಾರ್ಟ್'ಗೆ ಆಗಮಿಸಿದ್ದಕ್ಕೂ ಸಂಬಂಧವಿಲ್ಲ. ಇದು ಕೇವಲ ಆರ್ಥಿಕ ಅಪರಾಧದ ಪ್ರಕರಣಕ್ಕೆ ಸಂಬಂಧಿಸಿದ್ದು ಎಂದು ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ. ಡಿಕೆಶಿ ಮನೆ ಮೇಲೆ ದಾಳಿ ಮಾಡಿದಾಗ ಅವರು ಅಲ್ಲಿರಲಿಲ್ಲ. ರೆಸಾರ್ಟ್'ನಲ್ಲಿ ಅವರಿದ್ದದ್ದು ತಿಳಿದುಬಂದಿದ್ದರಿಂದ ಅಧಿಕಾರಿಗಳು ಅಲ್ಲಿಗೆ ಹೋಗಿದ್ದಾರೆ, ಎಂದೂ ಜೇಟ್ಲಿ ಹೇಳಿದ್ದಾರೆ.

ಬೆಂಗಳೂರು(ಆ. 02): ಐಟಿ ದಾಳಿಗೆ ಮುನ್ನ ಡಿಕೆ ಶಿವಕುಮಾರ್ ಕೆಲವು ಕಾಗದ ಪತ್ರಗಳನ್ನು ನಾಶ ಮಾಡಲು ಪ್ರಯತ್ನಿಸಿದರೇ? ಆದಾಯ ತೆರಿಗೆ ಅಧಿಕಾರಿಗಳು ಈಗಲ್ಟನ್ ರೆಸಾರ್ಟ್'ಗೆ ಬರುವ ವೇಳೆ ಡಿಕೆ ಶಿವಕುಮಾರ್ ಕೆಲ ಕಾಗದ ಪತ್ರಗಳನ್ನು ಹರಿದುಹಾಕಿದ್ದು ಕಂಡುಬಂದಿತು ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಆರೋಪಿಸಿದ್ದಾರೆ. ಲೋಕಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿಗೆ ಉತ್ತರವಾಗಿ ಐಟಿ ರೇಡ್'ನ್ನು ಸಮರ್ಥಿಸಿಕೊಂಡ ಅರುಣ್ ಜೇಟ್ಲಿ, ಈ ಮೇಲಿನ ವಿಚಾರವನ್ನು ಹೊರಗೆಡವಿದ್ದಾರೆ. ರೆಸಾರ್ಟ್'ನಲ್ಲಿ ಡಿಕೆಶಿಯವರು ಯಾವುದೋ ಕಾಗದಪತ್ರವನ್ನು ಹರಿಯಲು ಪಯತ್ನಿಸುತ್ತಿರುವುದು ಐಟಿ ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ. ಅಧಿಕಾರಿಗಳು ಪಂಚನಾಮೆ ಮಾಡುವ ಸಂದರ್ಭದಲ್ಲಿ ಹರಿದ ಕಾಗದಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆಂದು ಜೇಟ್ಲಿ ತಿಳಿಸಿದ್ದಾರೆ.

ಇದೇ ವೇಳೆ, ಡಿಕೆಶಿ ಮನೆ ಮೇಲೆ ನಡೆದ ದಾಳಿಗೂ ಗುಜರಾತ್ ಶಾಸಕರು ರೆಸಾರ್ಟ್'ಗೆ ಆಗಮಿಸಿದ್ದಕ್ಕೂ ಸಂಬಂಧವಿಲ್ಲ. ಇದು ಕೇವಲ ಆರ್ಥಿಕ ಅಪರಾಧದ ಪ್ರಕರಣಕ್ಕೆ ಸಂಬಂಧಿಸಿದ್ದು ಎಂದು ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ. ಡಿಕೆಶಿ ಮನೆ ಮೇಲೆ ದಾಳಿ ಮಾಡಿದಾಗ ಅವರು ಅಲ್ಲಿರಲಿಲ್ಲ. ರೆಸಾರ್ಟ್'ನಲ್ಲಿ ಅವರಿದ್ದದ್ದು ತಿಳಿದುಬಂದಿದ್ದರಿಂದ ಅಧಿಕಾರಿಗಳು ಅಲ್ಲಿಗೆ ಹೋಗಿದ್ದಾರೆ, ಎಂದೂ ಜೇಟ್ಲಿ ಹೇಳಿದ್ದಾರೆ.