"ನನಗಿರಲಿ... ನನ್ನಿಂದ ಕೆಲ ಜನರಿಗೆ ಆಯಿತಲ್ಲ... ಅವರಿಗೆ ಆದ ಹೆರಾಸ್ಮೆಂಟು.. ಅವರ ಜೊತೆ ಮಾತನಾಡಲು ನನಗೆ ಟೈಮೇ ಸಿಗ್ತಾ ಇಲ್ಲ..." ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ ಇಂಧನ ಸಚಿವರು, ಕೊನೆಯಲ್ಲಿ ಜನರು ತೀರ್ಮಾನ ಮಾಡುತ್ತಾರೆ ಎಂದು ಹೇಳಿ ತಮ್ಮ ಮಾತು ಮುಗಿಸಿದರು.
ಬೆಂಗಳೂರು(ಆ. 8): ಐಟಿ ರೇಡ್ ಬಳಿಕ ಡಿಕೆ ಶಿವಕುಮಾರ್ ಬದಲಾದಂತೆ ತೋರುತ್ತಿದ್ದಾರೆ. ಐಟಿ ರೇಡ್ ಮುಗಿದಾಕ್ಷಣ ಇದ್ದ ನೇರ ನಡವಳಿಕೆ ಈಗ ಸ್ವಲ್ಪ ಬದಲಾಗಿದೆ. ಈಗ ಅವರ ಮಾತುಗಳು ಒಗಟಿನಂತೆ ಕಾಣುತ್ತಿವೆ. ತಾನು ಬಾಯಿಬಿಟ್ಟರೆ ಯಾವ್ಯಾವ ವಿಚಾರ ಎಲ್ಲೆಲ್ಲಿಗೋ ಹೋಗಿಬಿಡುತ್ತದಾದ್ದರಿಂದ ತಾನು ಸದ್ಯಕ್ಕೆ ಏನೂ ಮಾತನಾಡುವುದಿಲ್ಲ ಎಂದು ಡಿಕೆಶಿ ಹೇಳಿದ್ದಾರೆ. ಮಗು ಹೆರುವಾಗ ಆಗುವ ನೋವು ಆ ಹೆಣ್ಣಿಗೇ ಗೊತ್ತಿರುತ್ತದೆ ಎಂದು ಹೇಳುವ ಮೂಲಕ ಡಿಕೆಶಿ ತಮಗೆ ನೋವಾಗಿರುವುದನ್ನು ಪರೋಕ್ಷವಾಗಿ ಹೇಳಿದ್ದಾರೆ.