ನಿನ್ನೆ ತಡರಾತ್ರಿಯಂದು ಇನ್ನಷ್ಟು ಸಂಖ್ಯೆಯಲ್ಲಿ ಐಟಿ ಅಧಿಕಾರಿಗಳು ಹಾಗೂ ಲೆಕ್ಕ ಪರಿಶೋಧಕರು ಆಗಮಿಸಿ ಡಿಕೆಶಿ ಮನೆಯಲ್ಲಿ ಸಿಕ್ಕಿದ ಕಡತಗಳನ್ನು ಪರಿಶೀಲನೆ ಮಾಡಿದ್ದಾರೆ. ಹಲವು ಮಹತ್ವದ ದಾಖಲೆಗಳು ಲಭಿಸಿವೆ ಎನ್ನಲಾಗಿದೆ. ಆದರೆ, ಮನೆಯಿಂದ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರ ಮೊಗದಲ್ಲಿ ಒಂದಿಷ್ಟೂ ದುಗುಡವಿರಲಿಲ್ಲ.
ಬೆಂಗಳೂರು(ಆ. 05): ಡಿಕೆಶಿ ಮನೆ ಮೇಲಿನ ಐಟಿ ರೇಡ್ 4ನೇ ದಿನಕ್ಕೆ ಕಾಲಿಟ್ಟಿದೆ. ಡಿಕೆಶಿಗೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ಬಗೆದಷ್ಟು ನಗದು ಮತ್ತು ಮೊಗೆದಷ್ಟು ದಾಖಲೆಗಳು ಸಿಕ್ಕುತ್ತಿವೆ ಎಂಬ ಮಾಹಿತಿ ಮಾಧ್ಯಮಗಳಿಗೆ ಲಭಿಸಿದೆ. ಆದರೆ, ಬಹಳ ಮುಖ್ಯವಾದ ವಿಚಾರವೆಂದರೆ, ರೇಡ್ ವೇಳೆ ಮಹತ್ವದ ತೆರಿಗೆ ವಂಚನೆ ದಾಖಲೆ ಪತ್ತೆಯಾಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಡಿಕೆ ಶಿವಕುಮಾರ್ ಅವರು ತೆರಿಗೆ ವಂಚನೆಗಾಗಿ 30ಕ್ಕೂ ಹೆಚ್ಚು ಕಂಪನಿಗಳನ್ನು ಸ್ಥಾಪಿಸಿದ್ದಾರೆನ್ನಲಾಗಿದೆ.