ನವದೆಹಲಿ, [ನ.02]:  ದೀಪಾವಳಿ ಹಬ್ಬವನ್ನ ಸಡಗರ-ಸಂಭ್ರಮದಿಂದ ಆಚರಿಸಲು ದೇಶದ ಜನತೆ ಸಿದ್ಧವಾಗುತ್ತಿರುವ ಮಧ್ಯೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಸಿಹಿ ಸುದ್ದಿ ನೀಡಿದೆ.

ಉದ್ಯಮಕ್ಕಾಗಿ ಒಂದು ಕೋಟಿ ರೂಪಾಯಿವರೆಗೆ ಸಾಲ ಪಡೆಯುವ ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಬಡ್ಡಿಯ ಮೇಲೆ ಶೇಕಡಾ 2 ರಷ್ಟು ರಿಯಾಯಿತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.

ಇಂದು [ಶುಕ್ರವಾರ] ಎಂಎಸ್ಎಂಇ ಸಪೋರ್ಟ್ ಪ್ರೋಗ್ರಾಂ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಮಹತ್ವದ ಘೋಷಣೆ ಮಾಡಿದರು. 

ಇದರಿಂದಾಗಿ ಮತ್ತಷ್ಟು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರ ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ಪ್ರಯತ್ನ ನಡೆಸುತ್ತಿದೆ. ಹೀಗಾಗಿ ಇಂತಹ ಉದ್ಯೋಗ ಸೃಷ್ಟಿಯಂತ ಯೋಜನೆಗಳನ್ನು ಜಾರಿಗೆ ತರಲು ಚಿಂತಿಸುತ್ತಿದೆ.