ವಿಚ್ಛೇದನ ಬಳಿಕ ಹಳೆಯ ಕಹಿ ನೆನಪುಗಳನ್ನು ಮನಸ್ಸಿನಲ್ಲಿ ಇಡದೆ ಅವರ ಜತೆ ಸ್ನೇಹ ಸಂಬಂಧ ಇಟ್ಟುಕೊಳ್ಳಿ. ಈ ವಿಷಯದಲ್ಲಿ ಹೃತಿಕ್‌ ರೋಷನ್‌-ಸುಸ್ಸಾನೆ ಖಾನ್‌, ಇತ್ತೀಚೆಗೆ ಕೊಲೆಯಾದ ಗೌರಿ ಲಂಕೇಶ್‌-ಚಿದಾನಂದ ರಾಜಘಟ್ಟ ಜೋಡಿಗಳನ್ನು ಆದರ್ಶವಾಗಿ ತೆಗೆದುಕೊಳ್ಳಿ ಎಂದು ಪಂಜಾಬ್‌ನ ಪಠಾಣ್‌ ಕೋರ್ಟ್‌ ಹೇಳಿದೆ.

ಚಂಡೀಗಢ (ನ.01): ವಿಚ್ಛೇದನ ಬಳಿಕ ಹಳೆಯ ಕಹಿ ನೆನಪುಗಳನ್ನು ಮನಸ್ಸಿನಲ್ಲಿ ಇಡದೆ ಅವರ ಜತೆ ಸ್ನೇಹ ಸಂಬಂಧ ಇಟ್ಟುಕೊಳ್ಳಿ. ಈ ವಿಷಯದಲ್ಲಿ ಹೃತಿಕ್‌ ರೋಷನ್‌-ಸುಸ್ಸಾನೆ ಖಾನ್‌, ಇತ್ತೀಚೆಗೆ ಕೊಲೆಯಾದ ಗೌರಿ ಲಂಕೇಶ್‌-ಚಿದಾನಂದ ರಾಜಘಟ್ಟ ಜೋಡಿಗಳನ್ನು ಆದರ್ಶವಾಗಿ ತೆಗೆದುಕೊಳ್ಳಿ ಎಂದು ಪಂಜಾಬ್‌ನ ಪಠಾಣ್‌ ಕೋರ್ಟ್‌ ಹೇಳಿದೆ.

2015ರಲ್ಲಿ ಪಠಾಣ್‌ಕೋಟಾದ 70 ವರ್ಷದ ಮಾಜಿ ಲೆ. ಕರ್ನಲ್‌ ಅನಿಲ್ ಕಬೋತ್ರಾ 60 ವರ್ಷದ ಹೆಂಡತಿಯ ಕ್ರೂರತೆಯಿಂದ ಬೇಸತ್ತು ವಿಚ್ಛೇದನ ಬಯಸಿದ್ದರು. ಇವರ ಕೇಸ್‌ ಅನ್ನು ಗಮನಿಸಿದ ಜಿಲ್ಲಾ ನ್ಯಾಯಾಧೀಶೆ ರಮೇಶ್ ಕುಮಾರಿಗೆ ಲೆ. ಕರ್ನಲ್‌ಗೆ ಹೆಂಡತಿ ತನ್ನ ಮೇಲೆ ಸುಳ್ಳು ಅಪಾದನೆ ಮಾಡಿದ್ದಾರೆ ಎಂಬ ಅಸಮಾಧಾನವಿರುವುದು ಗಮನಕ್ಕೆ ಬಂತು.

1990ರಲ್ಲಿ ಲೆ. ಕರ್ನಲ್ ಅವಾಹಿತರಾಗಿದ್ದಾಗ ವಿಚ್ಛೇದಿತ ಮಹಿಳೆಯನ್ನು ಭೇಟಿಯಾದರು. ಇವರಿಬ್ಬರ ಪರಿಚಯ ಪ್ರೇಮಕ್ಕೆ ಬಿದ್ದು ಒಂದು ವರ್ಷ ಜತೆಯಲ್ಲಿ ಬಾಳಿದ ಬಳಿಕ 1991ರಲ್ಲಿ ಮದುವೆಯಾದರು, 1992ರಲ್ಲಿ ಇವರಿಗೆ ಹೆಣ್ಣು ಮಗು ಹುಟ್ಟಿತು. ಚೆನ್ನಾಗಿದ್ದ ಇವರ ದಾಂಪತ್ಯದಲ್ಲಿ ಸಮಸ್ಯೆ ಪುನರಾರಂಭವಾಗಿದ್ದು 2001ರಲ್ಲಿ. ತಮ್ಮ ಆಸ್ತಿಯಲ್ಲಿ ಸಮಾನ ಪಾಲನ್ನು ಹೆಂಡತಿಗೆ ನೀಡಿದ್ದ ಮಾಜಿ ಲೆ. ಕರ್ನಲ್‌ ಮನೆ ಮಾರಿದಾಗ ಹೆಂಡತಿಗೆ ಸಮಪಾಲು ನೀಡಬೇಕೆಂದು ಹೆಂಡತಿ ಬೇಡಿಕೆ ಮುಂದಿಟ್ಟರು. ಆಗ ಎಫ್‌ಐಆರ್‌ ದಾಖಲಿಸಿದ ಕರ್ನಲ್‌ ವಿರುದ್ಧ ವರದಕ್ಷಿಣೆ, ಕಿರುಕುಳ ಮುಂತಾದ ಸುಳ್ಳು ಕೇಸ್‌ ಹಾಕಲಾಯಿತು. ಇವೆಲ್ಲಾ ಸುಳ್ಳು ಆರೋಪಗಳೆಂದು ಸುಪ್ರೀಂಕೋರ್ಟ್‌ನಲ್ಲಿ ಸಾಬೀತು ಆಯಿತು.

ಹೆಂಡತಿ ತನ್ನ ಮೇಲೆ ಸುಳ್ಳು ಅಪಾದನೆ ಮಾಡಿದ್ದಕ್ಕೆ ತುಂಬಾ ಕೋಪದಿಂದ ಇರುವ ಕರ್ನಲ್‌ ಅವರನ್ನು ಗಮನಿಸಿ, ವಿಚ್ಛೇದನ ಬಳಿಕ ಹಳೆಯ ಕಹಿಯನ್ನು ಮರೆತು ಸ್ನೇಹಿತರಂತೆ ಬಾಳಿ ಎಂದು ಸಲಹೆ ನೀಡಿದ್ದಾರೆ.