ಸ್ವಾಮೀಜಿ ಕಳೆದ ಕೆಲ ವರ್ಷಗಳ ಹಿಂದೆ ಖಾಸಗಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಬಳಿಕ ಮಠವನ್ನು ಹುಟ್ಟು ಹಾಕುವ ಮೂಲಕ ಸ್ವಾಮೀಜಿಯಾಗಿದ್ದರು ಎಂದು ಹೇಳಲಾಗಿದ್ದು ಆಡಿಯೋ ಮಾತನಾಡಿದ್ದು ಇವರೇ ಎಂಬ ಆರೋಪ ಕೇಳಿ ಬಂದಿದೆ.
ಬಾಗಲಕೋಟೆ(ಸೆ.04): ಜಿಲ್ಲೆಯ ಜಮಖಂಡಿ ತಾಲೂಕಿನ ಸ್ವಾಮೀಜಿಯೊಬ್ಬರು ಮಹಿಳೆಯೊಬ್ಬರ ಜತೆ ಅಶ್ಲೀಲವಾಗಿ ಸಂಭಾಷಣೆ ನಡೆಸಿರುವ ಆಡಿಯೋ ಇದೀಗ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವನ್ನುಂಟು ಮಾಡಿದೆ. ಮಹಿಳೆ ಜತೆಗೆ ಸ್ವಾಮೀಜಿ 1.44 ನಿಮಿಷ ಫೋನಿನಲ್ಲಿ ಅಶ್ಲೀಲವಾಗಿ ನಡೆಸಿರುವ ಸಂಭಾಷಣೆಯ ಆಡಿಯೋ ಕ್ಲಿಪ್ ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾನುವಾರ ವೈರಲ್ ಆಗಿದೆ.
ಸ್ವಾಮೀಜಿ ಕಳೆದ ಕೆಲ ವರ್ಷಗಳ ಹಿಂದೆ ಖಾಸಗಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಬಳಿಕ ಮಠವನ್ನು ಹುಟ್ಟು ಹಾಕುವ ಮೂಲಕ ಸ್ವಾಮೀಜಿಯಾಗಿದ್ದರು ಎಂದು ಹೇಳಲಾಗಿದ್ದು ಆಡಿಯೋ ಮಾತನಾಡಿದ್ದು ಇವರೇ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ಕೇಳಲು ಕನ್ನಡಪ್ರಭ ವರದಿಗಾರರು ಮೊಬೈಲ್‌ಗೆ ಕರೆ ಮಾಡಿದರೆ ಶ್ರೀಗಳ ಮೊಬೈಲ್ ಸ್ವಿಚ್ ಆಫ್ ಆಗಿದೆ.
