Asianet Suvarna News Asianet Suvarna News

ಕೊಲೆ ಕೇಸ್‌ : ಕಾಂಗ್ರೆಸ್ ಮುಖಂಡಗೆ ನೋಟಿಸ್

ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ನೋಟಿಸ್ ಜಾರಿ ಮಾಡಲಾಗಿದೆ.

District Court issued Notice To Congress Leader Vinay Kulkarni
Author
Bengaluru, First Published Jul 28, 2019, 9:52 AM IST

ಧಾರ​ವಾಡ [ಜು. 28]: ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದ​ಸ್ಯ​ರಾ​ಗಿದ್ದ ಯೋಗೀ​ಶಗೌಡ ​ಗೌಡರ ಕೊಲೆ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಮಾಜಿ ಸಚಿವ ವಿನಯ ಕುಲ​ಕರ್ಣಿಗೆ 4ನೇ ಹೆಚ್ಚು​ವರಿ ಜಿಲ್ಲಾ ನ್ಯಾಯಾ​ಲ​ಯವು ನೋಟಿಸ್‌ ನೀಡಿದೆ. 

ಅಲ್ಲದೆ, ಕೊಲೆಗೆ ಸಹಕರಿಸಿದ್ದಾರೆನ್ನಲಾದ ಕಾರಿನ ಚಾಲಕ ಮಂಜು​ನಾಥ ಬಸ​ವ​ಣ್ಣ​ ಅವರಿಗೂ ನೋಟಿಸ್‌ ನೀಡಲು ನ್ಯಾಯಾಲಯ ಆದೇಶಿಸಿದೆ. ಕೊಲೆ ಪ್ರಕ​ರ​ಣ​ದಲ್ಲಿ ವಿನಯ ಕುಲ​ಕರ್ಣಿ ಅವರ ಕೈವಾಡ ಇರುವ ಕುರಿತು ಹಲವು ಬಾರಿ ತನಿ​ಖಾ​ಧಿ​ಕಾ​ರಿ​ಗ​ಳಿಗೆ ಮನ​ವ​ರಿಕೆ ಮಾಡಿ​ದರೂ ಪ್ರಯೋ​ಜ​ನ​ವಾ​ಗಿಲ್ಲ. ಆರೋ​ಪಿ​ತರು ಬಳ​ಸಿದ್ದ ಕಾರಿನ ಬಗ್ಗೆಯೂ ತನಿ​ಖಾ​ಧಿ​ಕಾ​ರಿ​ಗಳು ಗಂಭೀ​ರ​ವಾಗಿ ಪರಿ​ಗ​ಣಿ​ಸಿಲ್ಲ. 

ಪ್ರಕ​ರ​ಣ​ವನ್ನು ಮುಚ್ಚಿ ಹಾಕಲು ಪ್ರಯ​ತ್ನಿ​ಸ​ಲಾ​ಗು​ತ್ತಿದೆ. ಆದ್ದ​ರಿಂದ ವಿನಯ ಕುಲ​ಕರ್ಣಿ ಹಾಗೂ ಕಾರು ಚಾಲಕ ಮಂಜು​ನಾಥ ಅವ​ರನ್ನು ಹೆಚ್ಚು​ವರಿ ಆರೋ​ಪಿ​ಗ​ಳಾಗಿ ಮಾಡ​ಬೇ​ಕೆಂದು ಯೋಗೀಶಗೌಡ ಸಹೋ​ದರ ಗುರು​ನಾಥ ಗೌಡ ಜಿಲ್ಲಾ ನ್ಯಾಯಾ​ಲ​ಯಕ್ಕೆ ಮಧ್ಯಂತರ ಅರ್ಜಿ ಸಲ್ಲಿ​ಸಿ​ದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಪ್ರಕ​ರ​ಣ​ದ ಸಂತ್ರ​ಸ್ತ​ರಿಗೆ ತಮ್ಮ ಅಭಿ​ಪ್ರಾಯ ಹಾಗೂ ಸಂಶ​ಯ​ಗ​ಳನ್ನು ಹೇಳಿ​ಕೊ​ಳ್ಳಲು ಅವ​ಕಾ​ಶ​ವಿದೆ ಎಂದು ತಿಳಿಸಿ, ವಿನಯ ಕುಲ​ಕರ್ಣಿ ಹಾಗೂ ಮಂಜು​ನಾಥ ಅವ​ರಿಗೆ ನೋಟಿಸ್‌ ಜಾರಿ ಮಾಡಲು ಆದೇ​ಶಿ​ಸಿ​ದರು. ಅರ್ಜಿ​ದಾ​ರರ ಪರ ನ್ಯಾಯ​ವಾದಿ ದೀಪಕ ಶೆಟ್ಟಿವಕಾ​ಲತ್ತು ವಹಿ​ಸಿ​ದ್ದರು.

ಹೆಚ್ಚು​ವರಿ ಆರೋ​ಪಿ​ಗಳಾಗಿ ಸೇರ್ಪಡೆ ಬೇಡ ಎಂದು ಆರೋ​ಪಿ​ತರ ಪರ ಹಾಗೂ ಸರ್ಕಾರಿ ವಕೀ​ಲರು ಆಕ್ಷೇಪ ವ್ಯಕ್ತ​ಪ​ಡಿ​ಸಿ​ದ್ದರು.

Follow Us:
Download App:
  • android
  • ios