ಬೆಂಗಳೂರು(ಸೆ.30): ಕೊನೆಗೂ ಸುವರ್ಣ ನ್ಯೂಸ್ ಚಾಲೆಂಜ್ ಸ್ವೀಕರಿಸಿದ ಜಿಲ್ಲಾಡಳಿತ ನಟ ದರ್ಶನ್, ಶಾಮನೂರು ಸೇರಿ 69 ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಿದೆ. ಒತ್ತುವರಿ ಸಂಬಂಧ ದಾಖಲೆ ಸಲ್ಲಿಸಲು 7 ದಿನ ಕಾಲಾವಕಾಶ ನೀಡಿದೆ.
ಆರ್ ಆರ್ ನಗರದ ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿರುವನಟ ದರ್ಶನ್ ಮನೆಯಿಂದ ಎರಡು ಗುಂಟೆ ಜಾಗ ಒತ್ತುವರಿಯಾಗಿದ್ದು, ಎಸ್ ಎಸ್ ಆಸ್ಪತ್ರೆಯಿಂದ 22 ಗುಂಟೆ ಜಾಗ ಒತ್ತುವರಿ ಆಗಿತ್ತು. ದರ್ಶನ್ ಮನೆ, ಶಾಮನೂರು ಆಸ್ಪತ್ರೆ ಒತ್ತುವರಿ ಕುರಿತು ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು.
ಈ ವರದಿ ಹಿನ್ನಲೆಯಲ್ಲಿ ಬೆಂಗಳೂರು ನಗರ ಡಿಸಿ ವಿ.ಶಂಕರ್ ಆದೇಶದ ಮೇರೆಗೆ ನೋಟಿಸ್ ಜಾರಿ ಮಾಡಲಾಗಿದ್ದು, 33 ನಿವೇಶನಗಳು ಹಾಗೂ 36 ಕಟ್ಟಡಗಳಿಗೆ ನೋಟಿಸ್ ನೀಡಲಾಗಿದೆ. ಒತ್ತುವರಿದಾರರು ಅಕ್ಟೋಬರ್ 7ರೊಳಗೆ ತಹಸಿಲ್ದಾರ್ ಮುಂದೆ ಹಾಜರಾಗಲು ಸೂಚನೆ ನೀಡಲಾಗಿದ್ದು, ದಾಖಲೆ ಪರಿಶೀಲನೆ ಬಳಿಕ ತೆರವಿಗೆ ಆದೇಶ ಮಾಡಲಾಗುತ್ತೆ ಎನ್ನಲಾಗಿದೆ.
ಕೊನೆಗೂ ಬಿಗ್ ಚಾಲೆಂಜ್ ಸ್ವೀಕರಿಸಿದ ಜಿಲ್ಲಾಡಳಿತ: ನಟ ದರ್ಶನ್'ಗೆ ನೋಟಿಸ್ ಜಾರಿ...!
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.
Latest Videos
