ಹನುಮ ಜಯಂತಿ ರದ್ದಾದ ಹಿನ್ನಲೆಯಲ್ಲಿ ಶಾಂತಿಯುತ ಹನಮ ಜಯಂತಿ ಆಚರಣೆಗೆ ಜಿಲ್ಲಾಡಳಿತ ಅನುಮತಿ ನೀಡಿದೆ.
ಹುಣಸೂರು (ಡಿ.31): ಹನುಮ ಜಯಂತಿ ರದ್ದಾದ ಹಿನ್ನಲೆಯಲ್ಲಿ ಶಾಂತಿಯುತ ಹನಮ ಜಯಂತಿ ಆಚರಣೆಗೆ ಜಿಲ್ಲಾಡಳಿತ ಅನುಮತಿ ನೀಡಿದೆ.
ಹನುಮ ಜಯಂತಿ ಆಚರಣೆಗೆ ಅನುಮತಿ ನೀಡುವಂತೆ ಕಾಂಗ್ರೆಸ್ ಶಾಸಕ ಮಂಜುನಾಥ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸಲ್ಲಿಸಿದ್ದರು. ಮಂಜುನಾಥ್ ಮನವಿ ಮೆರೆಗೆ ಜಿಲ್ಲಾಧಿಕಾರಿ ಒಪ್ಪಿಗೆ ನೀಡಿದ್ದಾರೆ.
ಹನುಮ ಜಯಂತಿ ಮೆರವಣಿಗೆ ವಿಚಾರದಲ್ಲಿ ಗಲಭೆ ಉಂಟಾಗಿ ಹನುಮ ಜಯಂತಿ ರದ್ದಾಗಿತ್ತು.ಹುಣಸೂರು ಕ್ಷೇತ್ರದ ಸಾರ್ವಜನಿಕರು, ಕ್ಷೇತ್ರದ ಶಾಸಕರ ಮೇಲೆ ಒತ್ತಡ ತಂದಿದ್ದರಿಂದ ಶಾಂತಿಯುತ ಹನುಮ ಜಯಂತಿ ಆಚರಣೆಗೆ ಮಂಜುನಾಥ್ ಅನುಮತಿ ಕೇಳಿದ್ದರು. ಜಿಲ್ಲಾಡಳಿತ ಒಪ್ಪಿಗೆ ನೀಡಿದೆ. ಶೀಘ್ರದಲ್ಲಿಯೇ ಹುಣಸೂರಿನಲ್ಲಿ ಹನಮ ಜಯಂತಿ ನಡೆಯಲಿದೆ.
