ರುವುದರಿಂದ ಆ ಪಕ್ಷಕ್ಕೆ ತೀರಾ ಹತ್ತಿರವಾ​ಗುವುದು ಬೇಡ. ಹಾಗಂತ, ದೂರವಾ​ಗುವುದೂ ಬೇಡ. ಬದಲಾಗಿ ಸಮತೋಲಿತ ಸಂಬಂಧ ಕಾಯ್ದುಕೊಳ್ಳುವುದು ಸೂಕ್ತ

ಬೆಂಗಳೂರು(ಏ.16): ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಭಾರಿ ಗೆಲುವಿಗೆ ನೆರವು ನೀಡಿದ ಜೆಡಿಎಸ್‌ ಪಕ್ಷದೊಂದಿಗೆ ಸಮತೋಲಿತ ಸಂಬಂಧ ಉಳಿಸಿಕೊ​ಳ್ಳುವಂತೆ ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯ ನಾಯಕತ್ವಕ್ಕೆ ಸೂಚನೆ ನೀಡಿದೆ. 
ಮುಂದಿನ ಚುನಾವಣೆ ದೃಷ್ಟಿಯಿಂದ ಜೆಡಿಎಸ್‌ನೊಂದಿಗೆ ಸೂಕ್ಷ್ಮ ಸಂಬಂಧ ಕಾಯ್ದುಕೊಳ್ಳ​ಬೇಕಿ​ರುವುದರಿಂದ ಆ ಪಕ್ಷಕ್ಕೆ ತೀರಾ ಹತ್ತಿರವಾ​ಗುವುದು ಬೇಡ. ಹಾಗಂತ, ದೂರವಾ​ಗುವುದೂ ಬೇಡ. ಬದಲಾಗಿ ಸಮತೋಲಿತ ಸಂಬಂಧ ಕಾಯ್ದುಕೊಳ್ಳುವುದು ಸೂಕ್ತ ಎಂದು ತಮ್ಮನ್ನು ಭೇಟಿ ಮಾಡಿದ ರಾಜ್ಯ ನಾಯಕತ್ವಕ್ಕೆ ಹೈಕಮಾಂಡ್‌ನ ವರಿಷ್ಠರು ಸೂಚನೆ ನೀಡಿದರು ಎಂದು ಮೂಲಗಳು ಹೇಳಿವೆ. 

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತ ನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜೆಡಿಎಸ್‌ನೊಂದಿಗೆ ಚುನಾವಣೆ ಪೂರ್ವ ಒಪ್ಪಂದವನ್ನು ಮಾಡಿಕೊಳ್ಳು ವುದಿಲ್ಲ. ಕಾಂಗ್ರೆಸ್‌ ಸ್ವ ಸಾಮರ್ಥ್ಯ ದೊಂದಿಗೆ ಚುನಾವಣೆ ಎದುರಿಸಲಿದೆ ಎಂದು ಹೇಳಿದರು. ಇದೇ ವೇಳೆ ಅವರಿಗೆ ಹೈಕಮಾಂಡ್‌ ನಾಯಕರು, ಉಪ ಚುನಾವಣೆಯ ಗೆಲುವಿನ ಓಘವನ್ನು ಉಳಿಸಿಕೊಳ್ಳಬೇಕು. ಇದಕ್ಕಾಗಿ 2018ರ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಬೇಕು ಎಂದು ಸೂಚನೆ ನೀಡಿದೆ ಎಂದು ಹೇಳಲಾಗಿದೆ.